ಮಂಗಳವಾರ, ಮಾರ್ಚ್ 21, 2023
20 °C
ಅಂಕಿ–ಸಂಖ್ಯೆಗಳ ವಿವರಿಸಿ ತಿರುಗೇಟು

ಲಸಿಕೆ ಕೊರತೆ: ರಾಹುಲ್‌ ಪ್ರಶ್ನೆಗೆ ಬಿಜೆಪಿ ಕಟುಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಜುಲೈ ತಿಂಗಳು ಆರಂಭವಾಗಿದೆ. ಆದರೆ, ಲಸಿಕೆಗಳು ಬಂದಿಲ್ಲ. ಲಸಿಕೆಗಳು ಎಲ್ಲಿವೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ರಾಹುಲ್‌ ಪ್ರಶ್ನೆಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡರು ಹಾಗೂ ಆರೋಗ್ಯ ಸಚಿವರು, ಅಂಕಿ–ಸಂಖ್ಯೆಗಳ ಸಮೇತ ವಿವರ ನೀಡಿದ್ದಾರೆ.

‘ಜುಲೈ ತಿಂಗಳು ಲಭ್ಯವಾಗುವ ಲಸಿಕೆ ಕುರಿತು ಖಚಿತ ಮಾಹಿತಿಯನ್ನು ಗುರುವಾರವೇ ನೀಡಿದ್ದೆ. ರಾಹುಲ್‌ ಗಾಂಧಿ ಅವರ ಸಮಸ್ಯೆ ಏನು? ಅವರು ಈ ಮಾಹಿತಿಯನ್ನು ಓದಿಲ್ಲವೇ? ಅಥವಾ ಅವರಿಗೆ ಇದು ಅರ್ಥವಾಗುವುದಿಲ್ಲವೇ? ಅಜ್ಞಾನಕ್ಕೆ ಯಾವುದೇ ಲಸಿಕೆ ಇಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ವ್ಯಂಗ್ಯವಾಡಿದ್ದಾರೆ.

’ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಸಮಗ್ರವಾದ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಹೇಳಿಕೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ‘ಜುಲೈ 1ರಂದು 41.60 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ. ಜೂನ್‌ 21ರಿಂದ ಜುಲೈ 1ರವರೆಗೆ 6.85 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಅಂದರೆ ಸರಾಸರಿ ಪ್ರತಿ ದಿನ 62 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ’ ಎಂದು ವಿವರಿಸಿದ್ದಾರೆ.

‘ಕಾಂಗ್ರೆಸ್‌ ನಾಯಕನಿಗೆ 51 ವರ್ಷಗಳಾಗಿವೆ. ಆದರೂ, ಪ್ರೌಢಿಮೆ, ಬುದ್ಧಿವಂತಿಕೆ ಮತ್ತು ಜವಾಬ್ದಾರಿಗಳು ಬಂದಿಲ್ಲವೇ ಎಂದು ಜನರು ಪ್ರಶ್ನಿಸುವಂತಾಗಿದೆ’ ಎಂದು ರಾಹುಲ್‌ ಅವರನ್ನು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು