ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ರಾಹುಲ್ ಪಿಕ್‌ನಿಕ್; ಅಮಿತ್ ಶಾ

Last Updated 22 ಮಾರ್ಚ್ 2021, 16:06 IST
ಅಕ್ಷರ ಗಾತ್ರ

ಉದಯ್‌ಗಿರಿ (ಅಸ್ಸಾಂ): ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರ ಇತ್ತೀಚಿನ ಅಸ್ಸಾಂ ಭೇಟಿಯು ಪಿಕ್‌ನಿಕ್ ಹೊರತಾಗಿ ಬೇರೆ ಏನು ಆಗಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೇವಡಿ ಮಾಡಿದ್ದಾರೆ.

'ಇತ್ತೀಚೆಗೆ ರಾಹುಲ್ ಬಾಬಾ ಅಸ್ಸಾಂಗೆ ಭೇಟಿ ನೀಡಿದ್ದರು. ಅವರಿಗೆ ಅಸ್ಸಾಂ ಭೇಟಿಯು ಪಿಕ್‌ನಿಕ್ ಮಿಗಿಲಾಗಿ ಬೇರೆ ಏನು ಆಗಿರಲಿಲ್ಲ. ಅವರು ಇಲ್ಲಿ ಬರುತ್ತಾರೆ, ಪಿಕ್‌ನಿಕ್ ಆನಂದಿಸುತ್ತಾರೆ ಮತ್ತು ಹಿಂತಿರುಗುತ್ತಾರೆ' ಎಂದವರು ಆರೋಪಿಸಿದ್ದಾರೆ.

'ಕಾರ್ಮಿಕರ ಬಗ್ಗೆ ರಾಹುಲ್ ಮಾತನಾಡುವಾಗ, ನನಗೂ ನಗು ಬರುತ್ತದೆ. ಏಕೆಂದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚಹಾ ತೋಟದ ಕಾರ್ಮಿಕರಿಗಾಗಿ ಏನನ್ನೂ ಮಾಡಿರಲಿಲ್ಲ' ಎಂದು ಅಮಿತ್ ಶಾ ತಿರುಗೇಟ್ ನೀಡಿದ್ದಾರೆ.

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಕಾಂಗ್ರೆಸ್ ಕಳೆದ 15 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಈ ಸಂದರ್ಭದಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳು ಜನರನ್ನು ಕೊಂದವು. ನಮ್ಮ ಭದ್ರತಾ ಯೋಧರನ್ನು ಕೊಲೆಗೈಯಲಾಯಿತು. ಯಾವುದೇ ತನಿಖೆ ನಡೆಯಲಿಲ್ಲ. ಬುಲೆಟ್, ಗನ್ ಮತ್ತು ಜನರನ್ನು ಕೊಲ್ಲುವುದು ಈ ಹಿಂದಿನ ಸರ್ಕಾರದ ವಿಷಯವಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕರು ಶರಣಾದರು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT