ಶುಕ್ರವಾರ, ಏಪ್ರಿಲ್ 23, 2021
27 °C

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್‌ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಹಿಂದಿಕ್ಕಿದೆ.

3035 ವಾರ್ಡ್‌ಗಳ ಪೈಕಿ 994 ವಾರ್ಡ್‌ಗಳಲ್ಲಿ ಮತ ಎಣಿಕೆ ನಡೆದಿದೆ. ಕಾಂಗ್ರೆಸ್‌ ಪಕ್ಷವು ಭಾನುವಾರ 398 ವಾರ್ಡ್‌ಗಳನ್ನು ಗೆದ್ದಿದೆ. ಬಿಜೆಪಿಯು 333 ವಾರ್ಡ್‌ಗಳಲ್ಲಿ ವಿಜಯ ಸಾಧಿಸಿದೆ.

ಸದ್ಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಈವರೆಗೆ ಎನ್‌ಸಿಪಿಯು 14, ಆರ್‌ಎಲ್‌ಪಿ 12,ಸಿಪಿಐ(ಎಂ) ಮತ್ತು ಬಿಎಸ್‌ಪಿ ತಲಾ 1 ಮತ್ತು ಸ್ವತಂತ್ರ ಅಭ್ಯರ್ಥಿಗಳು 235 ವಾರ್ಡ್‌ಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ಅಜ್ಮೀರ್, ಬನ್ಸ್ವಾರಾ, ಬಿಕಾನೇರ್, ಭಿಲ್ವಾರಾ, ಬುಂಡಿ, ಪ್ರತಾಪಗಡ, ಚಿತ್ತೋರ್‌ಗಡ, ಚುರು, ಡುಂಗಾರ್‌ಪುರ, ಹನುಮನ್‌ಗಡ, ಜೈಸಲ್ಮೇರ್, ಜಲೋರ, ಜಲಾವರ್‌, ನಾಗೌರ್, ಪಾಲಿ, ರಾಜಸಮಂದ್, ಸಿಕಾರ್, ಟೋಂಕ್ ಮತ್ತು ಉದಯಪುರ ಜಿಲ್ಲೆಯಲ್ಲಿ ಗುರುವಾರ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು