ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವೃತ್ತಿಗಳ ರಾಷ್ಟ್ರೀಯ ಆಯೋಗ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Last Updated 16 ಮಾರ್ಚ್ 2021, 15:35 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ವೃತ್ತಿಪರರು ಮತ್ತು ಸಂಬಂಧಿತರು ನೀಡುವ ಶಿಕ್ಷಣ ಮತ್ತು ಸೇವೆಗಳ ಮಾನದಂಡಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಅವಕಾಶ ನೀಡುವ ಮಸೂದೆಯನ್ನು ರಾಜ್ಯಸಭೆ ಮಂಗಳವಾರ ಅಂಗೀಕರಿಸಿದೆ.

ಆರೋಗ್ಯ ಆರೈಕೆ ವೃತ್ತಿ ಮತ್ತು ಸಂಬಂಧಿತ ವೃತ್ತಿಗಳ ರಾಷ್ಟ್ರೀಯ ಆಯೋಗ ಮಸೂದೆ–2020 ಅನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ..

ಮಸೂದೆಯ ಕುರಿತ ಚರ್ಚೆ ವೇಳೆ ಉತ್ತರಿಸಿದ ಆರೋಗ್ಯ ಸಚಿವ ಹರ್ಷ ವರ್ಧನ್, ಈ ಬಗ್ಗೆ ಸಂಸದೀಯ ಸಮಿತಿಯು ನೀಡಿದ 110 ಶಿಫಾರಸುಗಳ ಪೈಕಿ ಸರ್ಕಾರವು 102 ಅನ್ನು ಒಪ್ಪಿಕೊಂಡರೆ, ಆರು ಶಿಫಾರಸುಗಳನ್ನು ಸ್ವಲ್ಪ ಮಾರ್ಪಾಡುಗಳೊಂದಿಗೆ ಸ್ವೀಕರಿಸಿದೆ. ಕೇವಲ ಎರಡು ಶಿಫಾರಸುಗಳನ್ನು ಸ್ವೀಕರಿಸಲಾಗಿಲ್ಲ ಎಂದು ಹೇಳಿದ್ದಾರೆ.

ಮಸೂದೆಯು ಆರೋಗ್ಯ ವೃತ್ತಿಪರರು ಮತ್ತು ಸಂಬಂಧಿತರು ನೀಡುವ ಶಿಕ್ಷಣ ಮತ್ತು ಸೇವೆಗಳ ಮಾನದಂಡಗಳ ನಿಯಂತ್ರಣ ಮತ್ತು ನಿರ್ವಹಣೆ, ಸಂಸ್ಥೆಗಳ ಮೌಲ್ಯಮಾಪನ, ಕೇಂದ್ರ ರಿಜಿಸ್ಟರ್ ಮತ್ತು ರಾಜ್ಯ ರಿಜಿಸ್ಟರ್ ನಿರ್ವಹಣೆ. ಸಂಶೋಧನೆ ಮತ್ತು ಅಭಿವೃದ್ಧಿ ಸುಧಾರಣೆ ಮತ್ತು ಇತ್ತೀಚಿನ ವೈಜ್ಞಾನಿಕ ಪ್ರಗತಿಯನ್ನು ಅಳವಡಿಸಿಕೊಳ್ಳಲು ವ್ಯವಸ್ಥೆಯನ್ನು ರಚಿಸಲು ಅನುವುಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT