ಭಾನುವಾರ, ಆಗಸ್ಟ್ 14, 2022
20 °C

ಬಾಗಿಲು ಮುಚ್ಚಿದ ಕರಾಡ್‌ ಜನತಾ ಸಹಕಾರಿ ಬ್ಯಾಂಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದಿ ಕರಾಡ್ ಜನತಾ ಸಹಕಾರಿ ಬ್ಯಾಂಕ್‌ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಂಗಳವಾರ ರದ್ದು ಮಾಡಿದೆ. ಬ್ಯಾಂಕ್‌ ಬಳಿ ಅಗತ್ಯ ಪ್ರಮಾಣದ ಬಂಡವಾಳ ಇಲ್ಲದಿರುವುದು ಆರ್‌ಬಿಐನ ಈ ಕ್ರಮಕ್ಕೆ ಕಾರಣ.

ಈ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಿದ್ದ ಶೇಕಡ 99ಕ್ಕಿಂತ ಹೆಚ್ಚಿನವರಿಗೆ ಪೂರ್ಣ ಮೊತ್ತವು ವಾಪಸ್ ಸಿಗಲಿದೆ ಎಂದು ಆರ್‌ಬಿಐ ಹೇಳಿದೆ. ಪರವಾನಗಿ ರದ್ದಾಗಿರುವ ಕಾರಣ ಈ ಬ್ಯಾಂಕ್‌ ಇನ್ನು ಮುಂದೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸುವಂತಿಲ್ಲ.

‘ಈ ಬ್ಯಾಂಕ್‌ ಅಸ್ತಿತ್ವದಲ್ಲಿ ಇರುವುದು ಠೇವಣಿದಾರರ ಹಿತಕ್ಕೆ ಮಾರಕ. ಇದಕ್ಕೆ ಬ್ಯಾಂಕಿಂಗ್ ವಹಿವಾಟು ನಡೆಸಲು ಅವಕಾಶ ಕೊಟ್ಟರೆ ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗುತ್ತದೆ’ ಎಂದು ಆರ್‌ಬಿಐ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು