ಭಾನುವಾರ, ಮೇ 9, 2021
25 °C

ರೆಮ್‌ಡಿಸಿವಿರ್‌ ಕೊರತೆ: ಸನ್‌ ಫಾರ್ಮಾ ಮುಖ್ಯಸ್ಥರ ಜತೆ ನಿತಿನ್‌ ಗಡ್ಕರ್‌ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಕೋವಿಡ್‌–19ಗೆ  ಚಿಕಿತ್ಸೆ ನೀಡಲು 10 ಸಾವಿರ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ನಾಗಪುರಕ್ಕೆ ಪೂರೈಸುವಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸನ್‌ ಫಾರ್ಮಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಸನ್‌ ಫಾರ್ಮಾ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ ಸಾಂಘ್ವಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಗಡ್ಕರಿ ಅವರು, ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ರೆಮ್‌ಡಿಸಿವಿರ್‌ ಲಭ್ಯವಾಗುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು ಎಂದು ಪ್ರಕಟಣೆ ತಿಳಿಸಿದೆ.

ತಕ್ಷಣವೇ 5 ಸಾವಿರ ಇಂಜೆಕ್ಷನ್‌ಗಳನ್ನು ಪೂರೈಸಲಾಗುವುದು. ಉಳಿದ 5 ಸಾವಿರ ಇಂಜೆಕ್ಷನ್‌ಗಳನ್ನು ಎರಡು–ಮೂರು ದಿನಗಳಲ್ಲಿ ಪೂರೈಸಲಾಗುವುದು ಎಂದು ಸಾಂಘ್ವಿ ಭರವಸೆ ನೀಡಿದ್ದಾರೆ

ಮಹಾರಾಷ್ಟ್ರದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ರೆಮ್‌ಡಿಸಿವಿರ್‌ ಔಷಧಕ್ಕೆ  ಬೇಡಿಕೆ ಹೆಚ್ಚಾಗಿದೆ.

‘ರಾಜ್ಯದಲ್ಲಿ ರೆಮ್‌ಡಿಸಿವರ್‌ ಇಂಜೆಕ್ಷನ್‌ ಕೊರತೆಯಾಗಿದೆ. ಜತೆಗೆ ಲಸಿಕೆ ಪೂರೈಕೆಯೂ ಕಡಿಮೆಯಾಗಿದೆ’ ಎಂದು ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾಸಾಹೇಬ್‌ ತೋರಾಟ್‌ ಶನಿವಾರ ಹೇಳಿಕೆ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು