ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನದ ಮರುನಾಮಕರಣವು ದ್ವೇಷ ರಾಜಕಾರಣ: ಸಂಸದ ಟೀಕೆ

Last Updated 3 ಸೆಪ್ಟೆಂಬರ್ 2021, 8:31 IST
ಅಕ್ಷರ ಗಾತ್ರ

ನವದೆಹಲಿ: ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಮರುನಾಮಕರಣ ಮಾಡಲು ಅಸ್ಸಾಂ ಸರ್ಕಾರ ಮುಂದಾಗಿದ್ದು, ಈ ಮೂಲಕ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಮತ್ತು ಸಂಸದ ರಿಪುನ್ ಬೋರಾ ಅವರು ಶುಕ್ರವಾರ ಟೀಕಿಸಿದ್ದಾರೆ.

ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ರಿಪುನ್ ಬೋರಾ ಪತ್ರ ಬರೆದಿದ್ದಾರೆ.

‘ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ದಿವಂಗತ ಪ್ರಧಾನಿ ರಾಜೀವ್‌ ಗಾಂಧಿ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯಲಿದೆ. 1985ರ ಅಸ್ಸಾಂ ಒಪ್ಪಂದದ ಮೂಲಕ ಹಲವು ವರ್ಷಗಳ ರಕ್ತಪಾತದ ಆಂದೋಲನವನ್ನು ಕೊನೆಗೊಳಿಸುವಲ್ಲಿ ರಾಜೀವ್‌ ಗಾಂಧಿ ಅವರ ಪಾತ್ರವನ್ನು ರಾಜ್ಯದ ಜನರು ಸದಾ ಸ್ಮರಿಸಲಿದ್ದಾರೆ’ ಎಂದು ಅವರು ‍ಪತ್ರದಲ್ಲಿ ತಿಳಿಸಿದ್ದಾರೆ.

‘ಮಹಾನ್‌ ನಾಯಕನಿಗೆ ಗೌರವಾರ್ಥವಾಗಿ ಒರಂಗ್‌ ರಾಷ್ಟ್ರೀಯ ಉದ್ಯಾನವನ್ನು ರಾಜೀವ್‌ ಗಾಂಧಿ ಒರಂಗ್‌ ರಾಷ್ಟ್ರೀಯ ಉದ್ಯಾನವೆಂದು ಮರುನಾಮಕರಣ ಮಾಡಲು ದಿವಂಗತ ಹಿತೇಶ್ವರ್‌ ಸೈಕಿಯಾ ನೇತೃತ್ವದ ಸರ್ಕಾರವು ನಿರ್ಧರಿಸಿತ್ತು. ಅಲ್ಲದೆ ಈ ಉದ್ಯಾನವನವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಬುಧವಾರ (ಸೆ.1) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜೀವ್‌ಗಾಂಧಿ ನ್ಯಾಷನಲ್‌ ಪಾರ್ಕ್‌ನ ಹೆಸರನ್ನು ಒರಂಗ್ ನ್ಯಾಷನಲ್‌ ಪಾರ್ಕ್‌ ಎಂದು ಬದಲಾಯಿಸಲು ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಆರೋಪಿದರು.

‘ಅಸ್ಸಾಂ ಸರ್ಕಾರದ ಈ ನಿರ್ಧಾರವು ಜನರ ಭಾವನೆಗಳನ್ನು ನೋಯಿಸಿದೆ. ಈ ರೀತಿಯ ನಿರ್ಧಾರಗಳು ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ನೆರವಾಗುವುದಿಲ್ಲ. ಈ ನಿರ್ಧಾರವನ್ನು ಬದಲಾಯಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT