ಬುಧವಾರ, ಜೂನ್ 23, 2021
23 °C
ದೆಹಲಿಯ ಖ್ಯಾತ ಪ್ರಸೂತಿ ತಜ್ಞೆ

ರಾಹುಲ್, ಪ್ರಿಯಾಂಕಾ ಹೆರಿಗೆ ಮಾಡಿಸಿದ್ದ ಪ್ರಸೂತಿ ತಜ್ಞೆ ಡಾ.ಎಸ್.ಕೆ.ಭಂಡಾರಿ ನಿಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಲ್ಲಿನ ಸರ್‌ ಗಂಗಾರಾಮ್‌ ಆಸ್ಪತ್ರೆಯಲ್ಲಿ 58 ವರ್ಷಗಳ ಕಾಲ ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸಿದ್ದ ಡಾ.ಎಸ್‌.ಕೆ.ಭಂಡಾರಿ (86) ಅವರು ಗುರುವಾರ ಕೋವಿಡ್‌ನಿಂದ ನಿಧನರಾದರು.

ಡಾ.ಎಸ್.ಕೆ.ಭಂಡಾರಿ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಹೆರಿಗೆ ಮಾಡಿಸಿದ್ದಷ್ಟೇ ಅಲ್ಲದೆ, ಪ್ರಿಯಾಂಕಾ ಗಾಂಧಿ ಅವರ ಇಬ್ಬರು ಮಕ್ಕಳನ್ನೂ ಹೆರಿಗೆ ಮಾಡಿಸಿದವರು.

ಅವರ ಪತಿ, ನಿವೃತ್ತ ಐಎಎಸ್‌ ಅಧಿಕಾರಿ  ಜೆ.ಎಸ್‌. ಭಂಟಾರಿ  ಅವರೂ ಕೋವಿಡ್‌ನಿಂದ ಬಳಲುತ್ತಿದ್ದು, ಐಸಿಯುನಲ್ಲಿದ್ದಾರೆ. ಅವರಿಗೆ ಪುತ್ರಿ ಇದ್ದಾರೆ. ದಂಪತಿ ಎರಡನೇ ಡೋಸ್ ಕೋವಿಡ್‌ ಲಸಿಕೆಯನ್ನೂ ಪಡೆದಿದ್ದರು.

ಕಳೆದ ವರ್ಷದ ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲೂ ಅವರು ಆಸ್ಪತ್ರೆಗೆ ಬಂದು ಸೇವೆ ಸಲ್ಲಿಸಿದ್ದರು. ಆದರೆ ಬಳಿಕ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿದ್ದರು. ಆದರೆ ತಮ್ಮ ಮನೆಯಲ್ಲಿ ಸಲಹೆ ನೀಡುವುದನ್ನು ಮುಂದುವರಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು