ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭೇಟಿಗಾಗಿ ಅಭಿವೃದ್ಧಿಪಡಿಸಿದ ₹6 ಕೋಟಿ ವೆಚ್ಚದ ರಸ್ತೆ ಮೂರೇ ದಿನಕ್ಕೆ ಕುಸಿತ

ಕರ್ನಾಟಕ ಸರ್ಕಾರಕ್ಕೆ ಸಮಗ್ರ ವರದಿ ಕೇಳಿದ ಪ್ರಧಾನಿ ಕಚೇರಿ
Last Updated 23 ಜೂನ್ 2022, 16:24 IST
ಅಕ್ಷರ ಗಾತ್ರ

ನವದೆಹಲಿ:ಪ್ರಧಾನಿನರೇಂದ್ರ ಮೋದಿ ಭೇಟಿಗಾಗಿ ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದ ₹6 ಕೋಟಿ ವೆಚ್ಚದರಸ್ತೆಮೂರೇ ದಿನದಲ್ಲಿ ಕಿತ್ತುಹೋಗಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆಪ್ರಧಾನಿಕಚೇರಿ ಗುರುವಾರ ಸಂಜೆ ನಿರ್ದೇಶನ ನೀಡಿದೆ.

₹33 ಸಾವಿರ ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆಗಾಗಿ ಜೂನ್‌ 20ರಂದುಪ್ರಧಾನಿಅವರು ಬೆಂಗಳೂರಿಗೆ ಬಂದಿದ್ದರು.ಪ್ರಧಾನಿಸಾಗುವರಸ್ತೆಅಭಿವೃದ್ಧಿಗಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ₹24 ಕೋಟಿ ವೆಚ್ಚ ಮಾಡಿತ್ತು. ಜ್ಞಾನಭಾರತಿಯ ಡಾ.ಬಿ.ಆರ್. ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕಾನಮಿಕ್ಸ್‌ (ಬೇಸ್‌) ಕ್ಯಾಂಪಸ್‌ ಬಳಿ ₹6 ಕೋಟಿ ವೆಚ್ಚದಲ್ಲಿರಸ್ತೆಡಾಂಬರೀಕರಣ ಮಾಡಲಾಗಿತ್ತು. ಆರಸ್ತೆಒಂದೇ ದಿನದಲ್ಲಿ ಕುಸಿದುಹೋಗಿದೆ.

‘ಪ್ರಧಾನಿಸಾಗಿದ ರಸ್ತೆಯ ಸ್ಥಿತಿ ನೋಡಿ. ಇದು ಬಿಬಿಎಂಪಿಯ ಕಳಪೆ ಕಾಮಗಾರಿಗೆ ಸಾಕ್ಷಿ. ಶೇ 40 ಭ್ರಷ್ಟಾಚಾರಕ್ಕೆ ಮತ್ತೊಂದು ಉದಾಹರಣೆ’ ಎಂದುಕುಸಿದರಸ್ತೆಯ ಚಿತ್ರವನ್ನು ಟ್ಯಾಗ್‌ ಮಾಡಿದ್ದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಈ ಬಗ್ಗೆಪ್ರಧಾನಿಸಚಿವಾಲಯಕ್ಕೆ ಮಾಹಿತಿ ಹೋಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಭವನದಲ್ಲಿರುವಾಗಲೇ ಅವರಿಗೆ ದೂರವಾಣಿ ಕರೆ ಮಾಡಿದ್ದಪ್ರಧಾನಿಕಚೇರಿಯ ಅಧಿಕಾರಿಗಳು ಸಮಗ್ರ ವಿವರಣೆ ಕೇಳಿದರು. ಇದರಿಂದ ಮುಖ್ಯಮಂತ್ರಿ ಅವರು ಮುಜುಗರಕ್ಕೆ ಒಳಗಾದರು. ಕಳಪೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಈ ಪ್ರದೇಶದಲ್ಲಿ ನೀರಿನ ಪೈಪ್ ಸೋರಿಕೆಯಿಂದರಸ್ತೆಕುಸಿದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಜಲಮಂಡಳಿಯವರು ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಹಾಕಿದ್ದರು. ಬಿಬಿಎಂಪಿ ಅಧಿಕಾರಿಗಳು ಅದರ ಮೇಲೆ ಡಾಂಬರು ಹಾಕಿದ್ದಾರೆ. ಭಾರ ತಾಳಲಾರದೆರಸ್ತೆಕುಸಿದಿದೆ. ಈಗ ಎರಡು ಇಲಾಖೆಗಳ ಅಧಿಕಾರಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ವರದಿ ಬಂದ ಕೂಡಲೇ, ಕಳಪೆ ಕೆಲಸ ಮಾಡಿದ ಅಧಿಕಾರಿಯನ್ನು ಅಮಾನತು ಮಾಡಲಾಗುವುದು’ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT