ಸೋಮವಾರ, ಆಗಸ್ಟ್ 8, 2022
23 °C

ಸ್ಪೈಸ್‌ ಜೆಟ್‌ಗೆ ₹10 ಲಕ್ಷ ದಂಡ ವಿಧಿಸಿದ ಡಿಜಿಸಿಎ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಪೈಲಟ್‌ಗಳಿಗೆ ವಿಮಾನ ಸುರಕ್ಷತೆಗೆ ವಿರುದ್ಧವಾಗಿ ದೋಷಪೂರಿತ ಸಿಮ್ಯುಲೇಟರ್‌ನಲ್ಲಿ ತರಬೇತಿ ನೀಡಿದ್ದ ತಪ್ಪಿಗಾಗಿ ಸ್ಪೈಸ್‌ ಜೆಟ್‌ಗೆ ₹10 ಲಕ್ಷ ದಂಡವನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ವಿಧಿಸಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.

ಸಿಮ್ಯುಲೇಟರ್‌ನಲ್ಲಿ ಸ್ಪೈಸ್‌ ಜೆಟ್‌ನ ಪೈಲಟ್‌ಗಳು ತರಬೇತಿ ಪಡೆಯುತ್ತಿರುವುದು ಪತ್ತೆಯಾದ ನಂತರ ಕಳೆದ ತಿಂಗಳು ಮ್ಯಾಕ್ಸ್ ವಿಮಾನ ಚಾಲನೆ ಮಾಡದಂತೆ ಸ್ಪೈಸ್‌ ಜೆಟ್‌ನ 90 ಪೈಲಟ್‌ಗಳು ಮತ್ತು ಸಹ ಪೈಲಟ್‌ಗಳಿಗೆ ಕಳೆದ ತಿಂಗಳು ಡಿಜಿಸಿಎ ನಿರ್ಬಂಧ ಹೇರಿತ್ತು.

‘ವಿಮಾನವು ವಾಯು ಮಾರ್ಗದಲ್ಲಿ ಸ್ಥಗಿತಗೊಂಡಾಗ, ಪೈಲಟ್‌ಗಳ ತರಬೇತಿಯಲ್ಲಿ ದೋಷವಿರುವುದು ಪತ್ತೆಯಾಯಿತು. ಈ ಸಂಬಂಧ ಏಪ್ರಿಲ್‌ನಲ್ಲಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ವಿಮಾನಯಾನ ಸಂಸ್ಥೆಯ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದ ಕಾರಣಕ್ಕೆ ಡಿಜಿಸಿಎ, ಪೈಲಟ್‌ಗಳಿಗೆ ನಿರ್ಬಂಧ ಹೇರಿ, ಸಂಸ್ಥೆಗೆ ವಿಧಿಸಿದೆ’ ಎಂದು ಮೂಲಗಳು ತಿಳಿಸಿವೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು