ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Last Updated 9 ಮೇ 2022, 1:54 IST
ಅಕ್ಷರ ಗಾತ್ರ

ನವದೆಹಲಿ: 32 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೊಬ್ಬರ ಮೇಲೆ ದೆಹಲಿ ಪೊಲೀಸರು ಭಾನುವಾರ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

‘2013ರಲ್ಲಿ ಆರೋಪಿಯನ್ನು ನಾನು ಭೇಟಿಯಾಗಿದ್ದೆ ಮತ್ತು ನಂತರ ನಮ್ಮಿಬ್ಬರ ನಡುವೆ ಸ್ನೇಹ ಬೆಳೆದಿತ್ತು’ ಎಂದು ಯುಪಿಎಸ್‌ಸಿ ಆಕಾಂಕ್ಷಿ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

‘ಆಕೆಯ ದೂರಿನ ಆಧಾರದ ಮೇಲೆ ಇದೇ ವರ್ಷ ಏಪ್ರಿಲ್‌ 6ರಂದು ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ಎಫ್‌ಐಆರ್ ಕೂಡ ಹಾಕಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಈ ವರೆಗೆ ಬಂಧನ ಕ್ರಮವನ್ನು ಜರುಗಿಸಿಲ್ಲ’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಣ್ಣಿನ ಶಸ್ತ್ರಚಿಕಿತ್ಸೆ ನಂತರ ವ್ಯಕ್ತಿ ತನ್ನನ್ನು ನಿಂದಿಸಿ, ಥಳಿಸಿದ ಘಟನೆಯನ್ನೂ ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್‌ ಆಧಿಕಾರಿ ಹೇಳಿದ್ದಾರೆ.

‘ನಾನು ಅಳಲು ಪ್ರಾರಂಭಿಸಿದೆ. ನಂತರ ಅವರು ನನ್ನನ್ನು ಬಲವಂತಪಡಿಸಿದರು. ನಾನು ಅಳುತ್ತಿದ್ದರೂ ಲೆಕ್ಕಿಸದೇ ನನ್ನ ಮೇಲೆ ಅತ್ಯಾಚಾರ ಮಾಡಿ ಹೊರಟುಹೋದರು. ಮರುದಿನ ಬಂದ ಅವರು ನನ್ನ ಬಳಿ ಕ್ಷಮೆಯಾಚಿಸಲಾರಂಭಿಸಿದರು. ಅವರು ನನ್ನನ್ನು ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದರು’ ಎಂದು ಎಫ್‌ಐಆರ್‌ನಲ್ಲಿ ಮಹಿಳೆ ದೂರಿದ್ದಾರೆ.

ಆರೋಪಿ ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಮೂಲಕ ನನಗೆ ಬೆದರಿಕೆ ಹಾಕಿಸಿದ್ದಾರೆ ಎಂದೂ ಮಹಿಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT