ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್ ಕ್ಷಮಾಪಣೆ ಪತ್ರ ಒಂದು ತಂತ್ರವಾಗಿತ್ತು: ಪ್ರೀತಿ ಗಾಂಧಿ

Last Updated 14 ಅಕ್ಟೋಬರ್ 2021, 7:09 IST
ಅಕ್ಷರ ಗಾತ್ರ

ಬೆಂಗಳೂರು: ಮಹಾತ್ಮ ಗಾಂಧಿ ಸಲಹೆಯಂತೆ ವಿ.ಡಿ. ಸಾವರ್ಕರ್‌ ಬ್ರಿಟಿಷ್‌ ಸರ್ಕಾರಕ್ಕೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ ಬಳಿಕ ಸಾವರ್ಕರ್‌ ಕ್ಷಮಾಪಣೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

'ವೀರ್‌ ಸಾವರ್ಕರ್ ಕ್ಷಮಾಪಣೆ ಪತ್ರ ಒಂದು ತಂತ್ರವಾಗಿತ್ತು. ಜೈಲಿನಿಂದ ಹೊರಬಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದು ಕ್ಷಮಾಪಣೆ ಪತ್ರದ ಉದ್ದೇಶವಾಗಿತ್ತು' ಎಂದು ಬಿಜೆಪಿ ಕಾರ್ಯಕರ್ತೆ ಪ್ರೀತಿ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಕೆಲವು ಮಂದಿ 'ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕು' ಎಂಬ ಗಾಂಧಿ ತತ್ವವನ್ನಿಟ್ಟುಕೊಂಡು ಗಾ-ಗಾ (ಗಾಂಧಿ-ಗಾಂಧಿ) ಎನ್ನುವವರು, ವೀರ ಸಾವರ್ಕರ್‌ ಅವರು ಜೈಲಿನಿಂದ ಹೊರಬಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕ್ಷಮಾಪಣೆ ಪತ್ರದ ತಂತ್ರ ಹೆಣೆದರೆ ಅದರಿಂದ ಮುಜುಗರವಾಯಿತು ಎಂದು ಹೇಳುತ್ತಾರೆ ಎಂದು ಸಾವರ್ಕರ್‌ ಟೀಕಾರರನ್ನು ಗುರಿಯಾಗಿಸಿ ಪ್ರೀತಿ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT