ಬುಧವಾರ, ಮಾರ್ಚ್ 3, 2021
30 °C

‘ತಾಂಡವ್‌’ ವಿವಾದ: ಎರಡು ದೃಶ್ಯಗಳಿಗೆ ಕತ್ತರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವಿವಾದಿತ ‘ತಾಂಡವ್‌’ ವೆಬ್‌ ಸರಣಿಯ ಎರಡು ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದೆ.  

ಸೈಫ್‌ ಅಲಿ ಖಾನ್‌ ಹಾಗೂ ಡಿಂಪಲ್‌ ಕಪಾಡಿಯಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯು ಅಮೆಜಾನ್‌ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. 

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಹಿಂದೂ ದೇವತೆಗಳನ್ನು ಅವಮಾನ ಮಾಡಿರುವ ಆರೋಪದಡಿ ಈ ಚಿತ್ರದ ವಿರುದ್ಧ ದೇಶದ ವಿವಿಧೆಡೆ  ಪ್ರತಿಭಟನೆ ನಡೆಸಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬುಧವಾರ ಚಿತ್ರ ನಿರ್ಮಾತೃಗಳ ವಿರುದ್ಧ ಮತ್ತೆರಡು ಎಫ್‌ಐಆರ್‌ ದಾಖಲಾಗಿದೆ. ‌ 

ಸರಣಿಯ ಮೊದಲ ಎಪಿಸೋಡ್‌ನ (ತಾನಶಾ) ಒಂದು ದೃಶ್ಯ ಹಾಗೂ ಚಿತ್ರದಲ್ಲಿನ ಶಿವ ಹಾಗೂ ನಾರದ ಮುನಿ ಪಾತ್ರಧಾರಿಗಳ ನಡುವಣ ವಿವಾದಿತ ಸಂಭಾಷಣೆಯನ್ನು ತೆಗೆದು ಹಾಕಲಾಗಿದೆ. ಪ್ರಧಾನಿ ದೇವಕಿ ನಂದನ್‌ ಸಿಂಗ್‌ ಅವರು ದಲಿತ ನಾಯಕ ಕೈಲಾಸ್‌ ಕುಮಾರ್‌ ಅವರನ್ನು ನಿಂದಿಸುವ ಸಂಭಾಷಣೆಗೂ ಕತ್ತರಿ ಹಾಕಲಾಗಿದೆ.

‘ಅಲಿ ಅಬ್ಬಾಸ್‌ ಜಾಫರ್‌ ಅವರು ನಿರ್ದೇಶಿಸಿರುವ ವೆಬ್‌ ಸರಣಿಯ ವಿರುದ್ಧ ಪೊಲೀಸ್‌ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್‌ ತಿಳಿಸಿದ್ದಾರೆ.   

ದೂರು ನೀಡಿದವರ ಹೆಸರನ್ನು ಅವರು ಬಹಿರಂಗಪ‍ಡಿಸಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು