ಭಾನುವಾರ, ಏಪ್ರಿಲ್ 18, 2021
31 °C

ಕಾಶ್ಮೀರದಲ್ಲಿ ಶಾಲೆಗಳು ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಕಾಶ್ಮೀರದಲ್ಲಿ ಸೋಮವಾರ ಶಾಲೆಗಳು ಪುನರಾರಂಭಗೊಂಡವು. ಕೊರೊನಾ ಪರಿಸ್ಥಿತಿ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಮುಂಜಾಗ್ರತೆ ಕ್ರಮವಾಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಮಾರ್ಚ್‌ 9, 2020ರ ನಂತರ ಇದೇ ಮೊದಲ ಬಾರಿಗೆ ತರಗತಿಗಳಿಗೆ ಹಾಜರಾದರು. ಪೋಷಕರಿಂದ ಸಮ್ಮತಿ ಪತ್ರ ಪಡೆದಿರುವ ವಿದ್ಯಾರ್ಥಿಗಳಿಗಷ್ಟೇ ಹಾಜರಾಗಲು ಅವಕಾಶ ನೀಡಲಾಗಿತ್ತು.

ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ‘ಆಕ್ಷೇಪಣೆಯಿಲ್ಲ’ ಪ‍ತ್ರ ಪಡೆದುಕೊಂಡಿದ್ದವು. ಕೋವಿಡ್‌ ಪರಿಣಾಮ ಯಾವುದೇ ಅಹಿತಕರ ಬೆಳವಣಿಗೆ ಸಂಭವಿಸಿದಲ್ಲಿ ಬರಬಹುದಾದ ಆಕ್ಷೇಪಗಳ ಕಾರಣದಿಂದ ಈ ಕ್ರಮ ವಹಿಸಲಾಗಿತ್ತು.

‌ಅಲ್ಲದೆ, ತಮ್ಮ ಆರೋಗ್ಯ ಸ್ಥಿತಿ ಕುರಿತ ದೃಢೀಕರಣ ಪತ್ರವನ್ನು ತರುವಂತೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಸರ್ಕಾರದ ಆದೇಶದಂತೆ 6 ರಿಂದ 8ನೇ ತರಗತಿಗಳು ಮಾರ್ಚ್ 8ರಿಂದ, ಉಳಿದ ತರಗತಿಗಳು ಮಾರ್ಚ್ 18ರಿಂದ ಆರಂಭವಾಗಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು