ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ತಲುಪಿದ ‘ಸ್ಪುಟ್ನಿಕ್ ವಿ’ ಕೋವಿಡ್‌ ಲಸಿಕೆಯ 2ನೇ ಕಂತು

Last Updated 16 ಮೇ 2021, 9:59 IST
ಅಕ್ಷರ ಗಾತ್ರ

ಹೈದರಾಬಾದ್‌: ರಷ್ಯಾ ತಯಾರಿಸಿರುವ ‘ಸ್ಪುಟ್ನಿಕ್ ವಿ’ ಕೋವಿಡ್‌ ಲಸಿಕೆಯ ಎರಡನೇ ಬ್ಯಾಚ್‌ ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ತಲುಪಿದೆ.

‘ಸ್ಪುಟ್ನಿಕ್ ವಿ’ ಲಸಿಕೆಯ ಎರಡನೇ ಬ್ಯಾಚ್‌ ಹೈದರಾಬಾದ್‌ಗೆ ಬಂದಿದೆ ಎಂದು ‘ಸ್ಪುಟ್ನಿಕ್ ವಿ’ಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಿಳಿಸಲಾಗಿದೆ.

ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್ ಮೇ 14ರಂದು ಶೇಕಡ 5ರಷ್ಟು ಜಿಎಸ್‌ಟಿಯೊಂದಿಗೆ ₹948 ಬೆಲೆಯಲ್ಲಿ ಸ್ಪುಟ್ನಿಕ್‌ ವಿ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ.

‘ಭಾರತದ ಲಸಿಕಾ ಅಭಿಯಾನದಲ್ಲಿ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಯು ಸೇರ್ಪಡೆಯಾಗಿದೆ. ಎರಡನೇ ಬ್ಯಾಚ್‌ ಅನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ತಲುಪಿಸಲಾಗಿದೆ. ಈ ಲಸಿಕೆಯ ಸಾಮರ್ಥ್ಯವು ಇಡೀ ವಿಶ್ವಕ್ಕೆ ಚಿರಪರಿಚಿತ’ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಸೇವ್‌ ಅವರು ಟ್ವೀಟ್‌ ಮಾಡಿದ್ದಾರೆ.

ಮೇ 1 ರಂದು ಸ್ಪುಟ್ನಿಕ್‌ ವಿ ಲಸಿಕೆಯ ಮೊದಲ ಭಾಗ ಭಾರತಕ್ಕೆ ಆಗಮಿಸಿತ್ತು. ಮೊದಲ ಬ್ಯಾಚ್‌ನಲ್ಲಿ 1.50 ಲಕ್ಷ ಡೋಸ್‌ಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT