ಸೋಮವಾರ, ಡಿಸೆಂಬರ್ 5, 2022
25 °C

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ನೂತನ ಅಟಾರ್ನಿ ಜನರಲ್‌ (ಎ.ಜಿ) ಆಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಆರ್‌. ವೆಂಕಟರಮಣಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರ ಅಧಿಕಾರ ಅವಧಿ ಮೂರು ವರ್ಷ ಇರಲಿದೆ.

ಸದ್ಯ ಎ.ಜಿ ಆಗಿರುವ ಕೆ.ಕೆ. ವೇಣುಗೋಪಾಲ್‌ (91) ಅವರ ಅಧಿಕಾರಾವಧಿ ಇದೇ 30ರಂದು ಮುಕ್ತಾಯವಾಗಲಿದೆ. ಹೀಗಾಗಿ ಆರ್‌. ವೆಂಕಟರಮಣಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

1950ರ ಏಪ್ರಿಲ್‌ 13ರಂದು ಪುದುಚೇರಿಯಲ್ಲಿ ಜನಿಸಿದ ಇವರು, 1977ರಲ್ಲಿ ತಮಿಳುನಾಡಿನಿಂದ ವಕೀಲ ವೃತ್ತಿ ಆರಂಭಿಸಿದರು. 2014ರಿಂದ 2017ರವರೆಗೆ ಎ.ಜಿ ಆಗಿದ್ದ ಮುಕುಲ್‌ ರೋಹಟಗಿ ಅವರನ್ನು ಮತ್ತೊಂದು ಅವಧಿಗೆ ನೇಮಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಕೇಂದ್ರದ ಈ ಪ್ರಸ್ತಾವವನ್ನು ರೋಹಟಗಿ ತಿರಸ್ಕರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು