ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಸಾವಿರ ಕಿ.ಮೀ ದೂರದ ಗುರಿ ನಾಶ ಮಾಡುವ ‘ಶೌರ್ಯ’ ಕ್ಷಿಪಣಿ ಯಶಸ್ವಿ ಪರೀಕ್ಷೆ

Last Updated 3 ಅಕ್ಟೋಬರ್ 2020, 12:53 IST
ಅಕ್ಷರ ಗಾತ್ರ

ಬಾಲಸೋರ್‌ (ಒಡಿಶಾ): ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಶೌರ್ಯ’ ಹೆಸರಿನ ಸೂಪರ್‌ಸಾನಿಕ್‌ ಕ್ಷಿಪಣಿಯ ಪರೀಕ್ಷೆಯುಯಶಸ್ವಿಯಾಗಿ ಒಡಿಶಾದ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ನಡೆಯಿತು.

‘ಎಪಿಜೆ ಅಬ್ದುಲ್‌ ಕಲಾಂ ದ್ವೀಪದಲ್ಲಿ ಇರುವ ಉಡಾವಣಾ ಪರೀಕ್ಷಾ ಕೇಂದ್ರದಿಂದ ಮಧ್ಯಾಹ್ನ 12.10ರ ವೇಳೆಗೆ ಇದನ್ನು ಉಡಾವಣೆ ಮಾಡಲಾಯಿತು. ಬಂಗಾಳ ಕೊಲ್ಲಿಯಲ್ಲಿದ್ದ ಗುರಿಯನ್ನು ನಿಖರವಾಗಿ ಈ ಕ್ಷಿಪಣಿ ತಲುಪಿದೆ’ ಎಂದು ಮೂಲಗಳು ತಿಳಿಸಿವೆ.

‘ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಶೌರ್ಯ ಕ್ಷಿಪಣಿಯು, 10 ಮೀ. ಉದ್ದವಿದ್ದು, 74 ಸೆಂ.ಮೀ. ವ್ಯಾಸವಿದೆ. 6.2 ಟನ್‌ ತೂಕವಿರುವ ಈ ಕ್ಷಿಪಣಿಯು1 ಸಾವಿರ ಕಿ.ಮೀ ದೂರದಲ್ಲಿರುವ ಗುರಿಯನ್ನೂ ನಾಶಮಾಡಬಲ್ಲದು. ಕೆ–15 ಕ್ಷಿಪಣಿಯ ಲ್ಯಾಂಡ್‌ ವೇರಿಯೆಂಟ್‌(ನೆಲದಿಂದ ದಾಳಿ ನಡೆಸುವ ಮಾದರಿ) ಆಗಿರುವ ಶೌರ್ಯ, 200 ರಿಂದ 1 ಸಾವಿರ ಕೆ.ಜಿ ತೂಕದ ಸಿಡಿತಲೆಗಳನ್ನು ಹೊತ್ತು,700 ರಿಂದ 1,000 ಕಿ.ಮೀ. ದೂರಕ್ಕೆ ಕ್ರಮಿಸುವ ಸಾಮರ್ಥ್ಯ ಹೊಂದಿದೆ’ ಎಂದು ಮೂಲಗಳು ತಿಳಿಸಿವೆ.

‘ಸೂಪರ್‌ಸಾನಿಕ್‌ ವಿಭಾಗದಲ್ಲಿ ವಿಶ್ವದ ಪ್ರಮುಖ 10 ಕ್ಷಿಪಣಿಗಳ ಪೈಕಿ ಶೌರ್ಯ ಕೂಡಾ ಒಂದಾಗಿದ್ದು, ಅತ್ಯಾಧುನಿಕ ನಿಯಂತ್ರಣ ವ್ಯವಸ್ಥೆ ಹಾಗೂ ಉಡಾವಣಾ ವ್ಯವಸ್ಥೆಯನ್ನು ಹೊಂದಿದೆ. ಟ್ರಕ್‌ ಮೇಲಿರುವ ಕ್ಯಾನಿಸ್ಟರ್‌ಗಳಿಂದಲೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು. ಶತ್ರು ರಾಷ್ಟ್ರಗಳು ಪತ್ತೆಹಚ್ಚದ ರೀತಿಯಲ್ಲಿ ಈ ಕ್ಷಿಪಣಿಗಳನ್ನು ಇಡಬಹುದು. ಉಪಗ್ರಹ ಚಿತ್ರಗಳಿಂದಲೂ ಈ ಕ್ಷಿಪಣಿಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ’ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT