ಸೋಮವಾರ, ಮೇ 16, 2022
28 °C

5ನೇ ಬಾರಿಗೆ ನೇಪಾಳ ಪ್ರಧಾನಿಯಾದ ಶೇರ್‌ ಬಹದ್ದೂರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು (ಪಿಟಿಐ): ನೇಪಾಳದ ಪ್ರಧಾನಮಂತ್ರಿಯಾಗಿ ನೇಪಾಳಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶೇರ್‌ ಬಹದ್ದೂರ್ ದೇವುಬಾ ಅವರು ಐದನೇ ಬಾರಿಗೆ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಸಂವಿಧಾನದ ವಿಧಿ 75 (6)ರ ಅನ್ವಯ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ದೇವುಬಾ ಅವರನ್ನು ನೇಮಕ ಮಾಡಿದರು ಎಂದು ಸ್ಥಳೀಯ ದೈನಿಕ ಹಿಮಾಲಯನ್‌ ಟೈಂಸ್‌ ವರದಿ ಮಾಡಿದೆ.

ಹಾಲಿ ಪ್ರಧಾನಿಯಾಗಿದ್ದ ಕೆ.ಪಿ.ಒಲಿ ಅವರ ಸ್ಥಾನದಲ್ಲಿ ದೇವುಬಾ ಅಧಿಕಾರ ವಹಿಸಿಕೊಂಡಿದ್ದು, ಸಂವಿಧಾನದ ನಿಯಮಗಳ ಪ್ರಕಾರ, 30 ದಿನಗಳಲ್ಲಿ ಅವರು ಬಹುಮತ ಸಾಬೀತುಪಡಿಸಬೇಕಿದೆ.

ಸಂಸತ್ತು ವಿಸರ್ಜಿಸುವ ಹಾಲಿ ಪ್ರಧಾನಿ ಕೆ.ಪಿ.ಒಲಿ ಅವರ ಮೇ 21ರ ತೀರ್ಮಾನವನ್ನು ಸೋಮವಾರ ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್‌, ದೇವುಬಾ ಅವರನ್ನು ಪ್ರಧಾನಿಯಾಗಿ ನೇಮಿಸಬೇಕು ಎಂದು ಆದೇಶಿಸಿತ್ತು.

ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶಮ್‌ಶೇರ್ ರಾಣಾ ನೇತೃತ್ವದ ಪಂಚ ಸದಸ್ಯರ ಪೀಠವು, ಪ್ರಧಾನಮಂತ್ರಿ ಸ್ಥಾನದ ಹಕ್ಕು ಪ್ರತಿಪಾದಿಸುವ ಒಲಿ ಅವರ ಕ್ರಮ ಅಸಾಂವಿಧಾನಿಕವಾದುದು ಎಂದು ಅಭಿಪ್ರಾಯಪಟ್ಟಿತ್ತು.

ದೇವುಬಾ ಈ ಹಿಂದೆ ಜೂನ್‌ 2017–ಫೆಬ್ರುವರಿ 2018, ಜೂನ್‌ 2004 –ಫೆಬ್ರುವರಿ2005, ಜುಲೈ 2001–ಅಕ್ಟೋಬರ್‌ 2002 ಮತ್ತು ಸೆಪ್ಟೆಂಬರ್‌ 1995–ಮಾರ್ಚ್‌ 1997ರವರೆಗೆ ನಾಲ್ಕು ಬಾರಿ ಪ್ರಧಾನಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು