ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ಮೇಲೆ 2020 ನವೆಂಬರ್‌ನಲ್ಲೇ ಹಲ್ಲೆ ಮಾಡಿದ್ದ ಅಫ್ತಾಬ್

Last Updated 26 ನವೆಂಬರ್ 2022, 11:31 IST
ಅಕ್ಷರ ಗಾತ್ರ

ನವದೆಹಲಿ: ಶ್ರದ್ಧಾಳ ಭೀಕರ ಹತ್ಯೆ ಘಟನೆಯ ಆರೋಪಿ ಅಫ್ತಾಬ್ ಅಮಿನ್‌ ಪೂನಾವಾಲಾ ತನ್ನ ಸಹಜೀವನದ ಗೆಳತಿಯ ಮೇಲೆ ಮೊದಲಿಗೆ 2020ರ ನವೆಂಬರ್‌ನಲ್ಲಿ ಹಲ್ಲೆ ನಡೆಸಿದ್ದ ಎಂಬುದು ತಿಳಿದುಬಂದಿದೆ.

ಅಫ್ತಾಬ್ ವಿರುದ್ಧ ಪೊಲೀಸರಿಗೆ ದೂರು ನೀಡಲುಆಗಶ್ರದ್ಧಾ ಮುಂದಾಗಿದ್ದರು. ಅಫ್ತಾಬ್‌ನ ಪೋಷಕರ ಮಧ್ಯಪ್ರವೇಶದಿಂದಾಗಿ ಹಿಂದೆ ಸರಿದಿದ್ದರು ಎಂದು ಆಕೆಯ ಮಾಜಿ ಸಹೋದ್ಯೋಗಿ ಕರಣ್‌ ಹೇಳಿದ್ದಾರೆ.

ಶ್ರದ್ಧಾ ಜೊತೆಗೆ 2021ರ ಮಾರ್ಚ್‌ವರೆಗೆ ಮುಂಬೈನಲ್ಲಿ ಕರಣ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ನಡೆಸಿದ್ದ ವಾಟ್ಸ್ಆ್ಯಪ್‌ ಚರ್ಚೆಯ ವಿವರ ಈಗ ಜಾಲದಾಣದಲ್ಲಿ ಹೆಚ್ಚು ಹರಿದಾಡುತ್ತಿದೆ.

ಶ್ರದ್ಧಾಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿರುವ ಕರಣ್, ತನಿಖೆಯಲ್ಲಿ ಪೊಲೀಸರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT