ಸಿಸೋಡಿಯಾ, ಸತ್ಯೇಂದ್ರ ಜೈನ್ ಇಂದಿನ ಭಗತ್‌ಸಿಂಗ್ ಇದ್ದಂತೆ: ಕೇಜ್ರಿವಾಲ್

ನವದೆಹಲಿ: ಎಎಪಿ ನಾಯಕರಿಗೆ ಸಿಬಿಐ ಸಮನ್ಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಎರಡನೇ ಸ್ವಾತಂತ್ರ ಸಂಗ್ರಾಮ ನಡೆಸುತ್ತಿದೆ ಎಂದಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಆರೋಪಿತರಾಗಿರುವ ತಮ್ಮ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಕೇಜ್ರಿವಾಲ್ ಹುತಾತ್ಮ ಭಗತ್ ಸಿಂಗ್‌ಗೆ ಹೋಲಿಸಿದ್ದಾರೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಿಬಿಐ ಸಮನ್ಸ್ ನೀಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗಲಿದ್ದಾರೆ.
‘ಕೋಟ್ಯಂತರ ಬಡವರ ಪ್ರಾರ್ಥನೆ ನಿಮ್ಮೊಂದಿಗಿದೆ. ಜೈಲಿನ ಕಂಬಿಗಳು ಮತ್ತು ಗಲ್ಲು ಶಿಕ್ಷೆ ಭಗತ್ ಸಿಂಗ್ ಅವರ ದೃಢವಾದ ಉದ್ದೇಶವನ್ನು ತಡೆಯಲಿಲ್ಲ. ಇದು ಎರಡನೇ ಸ್ವಾತಂತ್ರ ಸಂಗ್ರಾಮ. 75 ವರ್ಷಗಳ ನಂತರ ದೇಶ ಉತ್ತಮ ಶಿಕ್ಷಣ ಸಚಿವರನ್ನು ಪಡೆದಿದ್ದು ಬಡವರಿಗೆ ಉತ್ತಮ ಶಿಕ್ಷಣ ಮೂಲಕ ಉಜ್ವಲ ಭವಿಷ್ಯ ನೀಡುತ್ತಿದ್ದಾರೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.