ಪುಣೆ: ಸಾವಧಿ ಠೇವಣಿ (ಟಿ.ಡಿ) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ₹ 22 ಲಕ್ಷ ಹಣ ವಂಚಿಸಿರುವ ಆರೋಪದಲ್ಲಿ ಮಹಾರಾಷ್ಟ್ರದ ಪುಣೆ ಅಂಚೆ ಕಚೇರಿಯ ಆರು ಮಂದಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಗರದ ಡಂಕ್ರಿಕ್ ಲೈನ್ಸ್ ಉಪ ಅಂಚೆ ಕಚೇರಿ, ಡಿಘಿ ಕ್ಯಾಂಪ್ ಉಪ ಅಂಚೆ ಕಚೇರಿ ಮತ್ತು ವಿಮನ್ ನಗರ ಕಾರ್ಮಿಕರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಜುಲೈ 2018 ಮತ್ತು ಆಗಸ್ಟ್ 2020ರ ನಡುವೆ ಡಿಘಿ ಕ್ಯಾಂಪ್ ಉಪ ಅಂಚೆ ಕಚೇರಿಯಲ್ಲಿ ಈ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.