ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಸಿಕ್ಕಿಂನಲ್ಲಿ ಕಣಿವೆಗೆ ಉರುಳಿದ ಸೇನಾ ವಾಹನ: 16 ಸೈನಿಕರ ಸಾವು

Last Updated 23 ಡಿಸೆಂಬರ್ 2022, 10:59 IST
ಅಕ್ಷರ ಗಾತ್ರ

ನವದೆಹಲಿ: ಸೇನಾ ವಾಹನ ಕಣಿವೆಗೆ ಉರುಳಿದ ಪರಿಣಾಮ 16 ಮಂದಿ ಯೋಧರು ಮೃತಪಟ್ಟಿರುವ ದುರಂತಉತ್ತರ ಸಿಕ್ಕಿಂನ ಝೆಮಾದಲ್ಲಿ ಶುಕ್ರವಾರ ಸಂಭವಿಸಿದೆ.

ಚಟ್ಟೆನ್‌ನಿಂದ ಥಂಗು ಪ್ರದೇಶಕ್ಕೆ ತೆರಳುತ್ತಿದ್ದ ಮೂರು ಸೇನಾ ವಾಹನಗಳ ಪೈಕಿ ಒಂದು ವಾಹನ ಅಪಘಾತಕ್ಕೀಡಾಗಿದೆ.

ದಾರಿ ಮಧ್ಯೆ, ಝೆಮಾ ಬಳಿ ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿದ ಸೇನಾ ವಾಹನ ಕಣಿವೆಗೆ ಉರುಳಿದೆ.

‘ಡಿಸೆಂಬರ್ 23ರಂದು ಉತ್ತರ ಸಿಕ್ಕಿಂನ ಝೆಮಾ ಬಳಿ ಸಂಭವಿಸಿದ ಸೇನಾ ಟ್ರಕ್ ಅಪಘಾತದಲ್ಲಿ ಭಾರತೀಯ ಸೇನೆಯ 16 ಮಂದಿ ಯೋಧರು ಜೀವ ಕಳೆದುಕೊಂಡಿದ್ದಾರೆ’ ಎಂದು ಸೇನೆ ತಿಳಿಸಿದೆ.

ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಕ್‌ನಿಂದ 15 ಕಿ.ಮೀ ದೂರದ ಲಾಚೆನ್‌ನ ಝೆಮಾ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

16 ಮೃತದೇಹಗಳನ್ನೂ ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT