ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕಾರುಗಳಿಗೂ ಬೇಕು ಆರು ಏರ್‌ಬ್ಯಾಗ್‌: ನಿತಿನ್‌ ಗಡ್ಕರಿ

Last Updated 19 ಸೆಪ್ಟೆಂಬರ್ 2021, 16:41 IST
ಅಕ್ಷರ ಗಾತ್ರ

ನವದೆಹಲಿ: ಕೆಳಮಧ್ಯಮ ವರ್ಗದ ಜನ ಹೆಚ್ಚಾಗಿ ಖರೀದಿಸುವ ಸಣ್ಣ ಕಾರುಗಳಲ್ಲಿ ಕೂಡ ಅಗತ್ಯ ಸಂಖ್ಯೆಯಲ್ಲಿ ಏರ್‌ಬ್ಯಾಗ್‌ಗಳು ಇರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಆಟೊಮೊಬೈಲ್ ಕಂಪನಿಗಳು ಶ್ರೀಮಂತರು ಮಾತ್ರ ಖರೀದಿಸುವ ದೊಡ್ಡ ಕಾರುಗಳಲ್ಲಷ್ಟೇ ಎಂಟು ಏರ್‌ಬ್ಯಾಗ್‌ಗಳನ್ನು ಅಳವಡಿಸುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಜನರ ಸುರಕ್ಷತೆಯ ದೃಷ್ಟಿಯಿಂದ ತಾವು ಸಣ್ಣ ಕಾರುಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಏರ್‌ಬ್ಯಾಗ್‌ಗಳು ಇರಬೇಕು ಎಂದು ಒತ್ತಾಯಿಸುತ್ತಿರುವುದಾಗಿ ಹೇಳಿದರು. ಹೆಚ್ಚಿನ ತೆರಿಗೆ, ಸುರಕ್ಷತೆ ಮತ್ತು ಅನಿಲ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಇರುವ ಕಠಿಣ ನಿಯಮಗಳು ವಾಹನಗಳನ್ನು ದುಬಾರಿ ಆಗಿಸಿವೆ ಎಂದು ಆಟೊಮೊಬೈಲ್ ಉದ್ದಿಮೆಯು ಕಳವಳ ವ್ಯಕ್ತಪಡಿಸಿರುವ ಹೊತ್ತಿನಲ್ಲಿಯೇ ಗಡ್ಕರಿ ಅವರು ಈ ಮಾತು ಹೇಳಿದ್ದಾರೆ.

ಕೆಳಮಧ್ಯಮ ವರ್ಗದ ಜನ ಸಣ್ಣ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಅವರು ಖರೀದಿಸುವ ಕಾರುಗಳಲ್ಲಿ ಏರ್‌ಬ್ಯಾಗ್‌ಗಳು ಇರದಿದ್ದರೆ ಅಪಘಾತ ಆದಾಗ ಸಾವು ಸಂಭವಿಸಬಹುದು. ಹಾಗಾಗಿ, ಎಲ್ಲ ಮಾದರಿಗಳ ಕಾರುಗಳಲ್ಲಿಯೂ ಕನಿಷ್ಠ ಆರು ಏರ್‌ಬ್ಯಾಗ್‌ಗಳು ಇರುವಂತೆ ಆಟೊಮೊಬೈಲ್ ಕಂಪನಿಗಳು ನೋಡಿಕೊಳ್ಳಬೇಕು ಎಂದು ಗಡ್ಕರಿ ಮನವಿ ಮಾಡಿದರು.

ಸಣ್ಣ ಕಾರುಗಳಲ್ಲಿ ಹೆಚ್ಚುವರಿಯಾಗಿ ಏರ್‌ಬ್ಯಾಗ್‌ಗಳನ್ನು ಅಳವಡಿಸುವುದರಿಂದ ಕಾರುಗಳ ಬೆಲೆಯು ₹ 3,000ದಿಂದ ₹ 4,000ದಷ್ಟು ಹೆಚ್ಚಳ ಆಗಬಹುದು ಎಂಬುದನ್ನು ಒಪ್ಪಿಕೊಂಡ ಗಡ್ಕರಿ, ‘ರಸ್ತೆ ಅಪಘಾತ ಸಂಭವಿಸಿದರೆ ಬಡವರಿಗೆ ಕೂಡ ರಕ್ಷಣೆ ಇರಬೇಕು’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT