ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ

ಶ್ರೀನಗರ: ಪಹಲ್ಗಾಮ್ ಹೊರತುಪಡಿಸಿ ಕಾಶ್ಮೀರದ ಕೆಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದ್ದು, ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹವಾಮಾನ ಇಲಾಖೆಯು ಸೋಮವಾರದಿಂದ ಮೂರು ದಿನಗಳಲ್ಲಿ ತೀವ್ರತೆಯ ಆರ್ದ್ರ ವಾತಾವರಣ ಇರುವ ಮುನ್ಸೂಚನೆ ನೀಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಗುಲ್‌ಮಾರ್ಗ್‌ನ ಜನಪ್ರಿಯ ಸ್ಕಿ ರೆಸಾರ್ಟ್ ಬಳಿಯೂ ಲಘು ಅಥವಾ ಮಧ್ಯಮ ಪ್ರಮಾಣದ ಹಿಮಪಾತವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನಲ್ಲಿ ಸೋಮವಾರದಿಂದ ಬುಧವಾರದವರೆಗೆ ಹೆಚ್ಚಿನ ಮಳೆ ಮತ್ತು ಮಧ್ಯಮ ಹಿಮ ಬೀಳಲಿದ್ದು, ಗುರುವಾರ ಮತ್ತು ಶುಕ್ರವಾರ ಲಘು ಮಳೆ ಅಥವಾ ಹಿಮ ಬೀಳಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಲ್ಲಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ರಾತ್ರಿ ಮೈನಸ್ 0.2ಕ್ಕೆ ಇಳಿದಿದೆ. ಅದೇ ರೀತಿ ಖಾಜಿಗುಂಡ್ ಪ್ರದೇಶದಲ್ಲಿಯೂ ಕನಿಷ್ಠ 0.2 ಡಿಗ್ರಿ ತಾಪಮಾನ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.