ಮುಂಬೈ: ಬಿಹಾರದ ದರ್ಭಂಗಾನಲ್ಲಿ ವಿಮಾನನಿಲ್ದಾಣ ಕಾಮಗಾರಿ ಅಂತಿಮ ಅಂತ ತಲುಪಿದ್ದು, ನವೆಂಬರ್ 8ರಿಂದ ಇಲ್ಲಿಂದ ವಿಮಾನ ಸಂಚಾರ ಆರಂಭಿಸುವುದಾಗಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.

ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ದರ್ಭಾಂಗ್ ವಿಮಾನ ನಿಲ್ದಾಣಕ್ಕೆ ವಿಮಾನ ಸಂಚಾರ ಆರಂಭಿಸುವುದಾಗಿ ಸ್ಪೈಸ್ ಜೆಟ್ ತಿಳಿಸಿದೆ.

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ದರ್ಭಾಂಗ್ ಮತ್ತು ಜಾರ್ಖಂಡ್‌ನಲ್ಲಿ ದೇವಗಡ ವಿಮಾನ ನಿಲ್ದಾಣಗಳ ಕಾಮಗಾರಿ ವೀಕ್ಷಿಸಿದ ನಂತರ ಸ್ಪೈಸ್ ಜೆಟ್ ಸಂಸ್ಥೆ, ತಮ್ಮ ಕಂಪನಿಯ ವಿಮಾನ ಸಂಚಾರದ ಬಗ್ಗೆ ಮಾಹಿತಿ ನೀಡಿದೆ.

ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಪುರಿ, ‘ಛಾಟ್ ಪೂಜಾ ಹಬ್ಬಕ್ಕೂ ಮುನ್ನ ದರ್ಭಾಂಗ್ ಏರ್ಪೋರ್ಟ್ ಕಾಮಗಾರಿ ಪೂರ್ಣಗೊಳ್ಳಲಿದೆ‘ ಎಂದು ತಿಳಿಸಿದ್ದರು.

ನವೆಂಬರ್ 8 ರಿಂದಸ್ಪೈಸ್ ಜೆಟ್ ಕಂಪನಿಯ ವಿಮಾನಗಳು ದೆಹಲಿ-ದರ್ಭಾಂಗ್, ಬೆಂಗಳೂರು-ದರ್ಭಾಂಗ್ ಮತ್ತು ಮುಂಬೈ-ದರ್ಗಾಭಾಂಗ್ ನಡುವೆ ಪ್ರತಿದಿನ ನೇರ ವಿಮಾನ ಹಾರಾಟ ನಡೆಸಲಿವೆ‘ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.