ಶನಿವಾರ, ಮಾರ್ಚ್ 25, 2023
25 °C

ದೇಶದ 50 ನಗರಗಳಲ್ಲಿ ಸ್ಪುಟ್ನಿಕ್–ವಿ ಲಸಿಕಾ ಕಾರ್ಯಕ್ರಮ: ಡಾ.ರೆಡ್ಡೀಸ್‌ ಲ್ಯಾಬ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ‘ಹೈದರಾಬಾದ್‌ನಲ್ಲಿ ಮೇ 14ರಂದು ಆರಂಭಗೊಂಡ ‘ಸ್ಪುಟ್ನಿಕ್‌–ವಿ’ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಯನ್ನು ದೇಶದ 50 ನಗರಗಳಲ್ಲಿ ವಿಸ್ತರಿಸಲಾಗಿದೆ’ ಎಂದು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್‌ ಹೇಳಿದೆ.

‘ಮುಂಬರುವ ವಾರಗಳಲ್ಲಿ ಸ್ಪುಟ್ನಿಕ್‌–ವಿ ಲಸಿಕೆಯ ವಾಣಿಜ್ಯ ವಹಿವಾಟನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು’ ಎಂದು ರೆಡ್ಡೀಸ್‌ ಲ್ಯಾಬ್‌ ಸೋಮವಾರ ರಾತ್ರಿ ಟ್ವೀಟ್ ಮಾಡಿದೆ.

‘ಹೈದರಾಬಾದ್‌ನಲ್ಲಿ ಆರಂಭಗೊಂಡ ಸ್ಪುಟ್ನಿಕ್‌–ವಿ ಲಸಿಕಾ ಕಾರ್ಯಕ್ರಮವು ಇದೀಗ ದೇಶದ ಹಲವು ನಗರಗಳಿಗೆ ವಿಸ್ತರಿಸಿದೆ. ಹೈದರಾಬಾದ್‌ಗೆ ಸೀಮಿತವಾಗಿರದೇ ವಿಶಾಖಪಟ್ಟಣ, ಬೆಂಗಳೂರು, ಮುಂಬೈ, ನವೀ ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ, ವಿಜಯವಾಡ, ಬಡ್ಡಿ, ಕೊಲ್ಹಾಪುರ, ಕೊಚ್ಚಿ, ರಾಯಪುರ, ಚಂಡೀಗಡ, ಪುಣೆ, ನಾಗಪುರ, ನಾಸಿಕ್‌ ಸೇರಿದಂತೆ ಹಲವು ನಗರಗಳಲ್ಲಿ ಸ್ಪುಟ್ನಿಕ್‌ ವಿ ಲಸಿಕಾ ಕಾರ್ಯಕ್ರಮ ಚಾಲನೆಯಲ್ಲಿದೆೆ’ ಎಂದು ಸಂಸ್ಥೆ ತಿಳಿಸಿದೆ.

‘ಇತ್ತೀಚಿಗೆ ರಷ್ಯಾದಿಂದ ಸ್ಪುಟ್ನಿಕ್‌–ವಿ ಲಸಿಕೆಯ 30 ಲಕ್ಷ ಡೋಸ್‌ಗಳನ್ನು ರೆಡ್ಡೀಸ್ ಲ್ಯಾಬೊರೇಟರೀಸ್ ಪಡೆದಿದೆ. ಇದನ್ನು 12.5 ಕೋಟಿ ಜನರಿಗೆ ವಿತರಿಸಲಾಗುವುದು.ಇದಕ್ಕಾಗಿ ದೇಶದ ಪ್ರಮುಖ ಆಸ್ಪತ್ರೆಗಳೊಂದಿಗೆ ನಾವು ಕೈಜೋಡಿಸಿದ್ದೇವೆ’ ಎಂದು ಸಂಸ್ಥೆ ಹೇಳಿದೆ.

ಗಮಲೇಯ ನ್ಯಾಷನಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಆಫ್ ಎಪಿಡೆಮಿಯಾಲಜಿ ಆ್ಯಂಡ್‌ ಮೈಕ್ರೋಬಯಾಲಜಿ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್‌–ವಿ ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕರು  ಅನುಮತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು