ಶನಿವಾರ, ಜನವರಿ 23, 2021
28 °C

ತಿರುಪತಿ: ಟೋಕನ್‌ ವಿತರಣೆ ಅವಧಿ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಮಲ: ತಿರುಪತಿಯ ಅಲಿಪಿರಿ ಸಮೀಪದ ವಿಷ್ಣು ನಿವಾಸಂ ಮತ್ತು ಭೂದೇವಿ ಸಂಕೀರ್ಣದ ಕೌಂಟರ್‌ಗಳಲ್ಲಿ ನೀಡಲಾಗುತ್ತಿರುವ ಸರ್ವದರ್ಶನದ ಟೋಕನ್‌ಗಳ ಅವಧಿಯು ಇದೇ 21ರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ ಎಂದು ತಿರುಮಲ
ತಿರುಪತಿ ದೇವಸ್ಥಾನಗಳ ಟ್ರಸ್ಟ್ (ಟಿಟಿಡಿ) ತಿಳಿಸಿದೆ.

ಡಿ. 22, 23 ಮತ್ತು 24ರ ದರ್ಶನದ ಟೋಕನ್‌ಗಳನ್ನು ಡಿ. 21 ಅಥವಾ ಅದಕ್ಕೂ ಮುನ್ನವೇ ನೀಡಲಾಗುತ್ತದೆ. ಈ ಬದಲಾವಣೆಯನ್ನು ಭಕ್ತರು ಗಮನಿಸಬೇಕು ಎಂದು ಎಂದು ಟಿಟಿಡಿ ಹೇಳಿದೆ.

ಕೋವಿಡ್‌ ನಿಯಾಮವಳಿಗಳನ್ನು ಅನುಸರಿಸಿ  ಹಾಗೂ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಈ ವರ್ಷ ವೈಕುಂಠ ದ್ವಾರ ದರ್ಶನದ ಟೋಕನ್‌ಗಳು ಸ್ಥಳೀಯ ಭಕ್ತರಿಗೆ ಮಾತ್ರ ಸೀಮಿತವಾಗಿರುತ್ತವೆ. ಸ್ಥಳೀಯರಲ್ಲದವರು ತಿರುಪತಿಯ ಐದು ಕೇಂದ್ರಗಳಲ್ಲಿ ಆಧಾರ್ ಕಾರ್ಡ್‌ ದಾಖಲೆ ಸಲ್ಲಿಸಿ ಎಸ್‌ಎಸ್‌ಡಿ ದರ್ಶನದ ಟೋಕನ್‌ಗಳನ್ನು ಪಡೆಯಬಹುದು ಎಂದು ಟಿಟಿಡಿ ಸಾರ್ವಜನಿಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು