ಶುಕ್ರವಾರ, ಅಕ್ಟೋಬರ್ 22, 2021
29 °C

ದುರ್ಗಮ ಪ್ರದೇಶದಲ್ಲಿ ಸಿಲುಕಿದ್ದ ಐಟಿಬಿಪಿ 16 ಸಿಬ್ಬಂದಿ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

‌ಪಿತೋರಗಡ, ಉತ್ತರಾಖಂಡ: ಚೀನಾ-ಭಾರತ ಗಡಿಯ ಸಮೀಪದ ಕುಟಿ ಕಣಿವೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸಿಲುಕಿಕೊಂಡಿದ್ದ ಐಟಿಬಿಪಿ 16 ಸಿಬ್ಬಂದಿಯನ್ನು ಭಾರತೀಯ ಸೇನೆಯ ಪಂಚಶುಲ್ ಬ್ರಿಗೇಡ್ ಶನಿವಾರ ರಕ್ಷಿಸಿದೆ.

ಐಟಿಬಿಪಿ ಸಿಬ್ಬಂದಿಯು ಕಣಿವೆಯ ದುರ್ಗಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಕಷ್ಟಕ್ಕೆ ಸಿಲುಕಿಕೊಂಡರು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು.

‘ಭಾರತ-ಚೀನಾ ಗಡಿಯ ಬಳಿ ಇರುವ ಕುಟಿ ಕಣಿವೆಯ ದುರ್ಗಮ ಪ್ರದೇಶದಲ್ಲಿ ಐಟಿಬಿಪಿ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ ಎಂದು ನಮ್ಮ ಸೈನ್ಯದ ಪಂಚಶುಲ್ ಬ್ರಿಗೇಡ್‌ಗೆ ಮಾಹಿತಿ ಬಂದಾಗ, ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯನ್ನು ರಕ್ಷಿಸಿದರು’ ಎಂದು ಪಂಚಶುಲ್ ಬ್ರಿಗೇಡ್‌ನ ಕ್ಯಾಪ್ಟನ್ ಕುಲದೀಪ್ ಸಿಂಗ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು