ಸೋಮವಾರ, ಸೆಪ್ಟೆಂಬರ್ 26, 2022
23 °C

ಸುನೀಲ್‌ ಕುಮಾರ್‌ ಭಟ್‌ ಹತ್ಯೆ ಪ್ರಕರಣ: ಉಗ್ರರ ಗುರುತು ಪತ್ತೆಯಾಗಿದೆ ಎಂದ ಡಿಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಗುಂಡಿನ ದಾಳಿ ನಡೆಸಿ ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯನ್ನು ಹತ್ಯೆಗೈದಿದ್ದ ಉಗ್ರರ ಗುರುತು ಪತ್ತೆ ಮಾಡಲಾಗಿದೆ. ಅವರಿಗೆ ಶಿಕ್ಷೆ ಕಠಿಣ ನೀಡಲಾಗುವುದು ಎಂದು ರಾಜ್ಯದ ಡಿಜಿಪಿ ದಿಲ್‌ಬಾಘ್‌ ಸಿಂಗ್‌ ಬುಧವಾರ ಹೇಳಿದ್ದಾರೆ. 

ಮೃತವ್ಯಕ್ತಿ ಸನೀಲ್‌ ಕುಮಾರ್‌ ಭಟ್‌ ಅವರ ದಾಯಾದಿ, ಪ್ರಕರಣದ ಪ್ರತ್ಯಕ್ಷದರ್ಶಿ ಪೀತಾಂಬರ್‌ ಭಟ್‌ ಅವರು ಉಗ್ರನನ್ನು ಗುರುತಿಸಿದ್ದಾರೆ.

ಗುರುತು ಪತ್ತೆ ಆಗಿರುವ ಇಬ್ಬರು ಉಗ್ರರೂ ನಿಷೇಧಿತ ಉಗ್ರ ಸಂಘಟನೆಯಾದ ‘ಅಲ್‌–ಬರ್ದಾರ್‌’ಗೆ ಸೇರಿರುವವರು. ಉಗ್ರರಲ್ಲಿ ಒಬ್ಬನಾದ ಆದಿಲ್‌ ವಾನಿಯು ಹತ್ಯೆ ನಡೆಸಿದ ಬಳಿಕ ಕುಟ‌್ಪೋರಾದ ತನ್ನ ಮನೆಯಲ್ಲಿ ಆಶ್ರಯ ಪಡೆದಿದ್ದನು. ಆತನನ್ನು ಸೆರೆಹಿಡಿಯಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಆದರೆ, ಪೊಲೀಸರ ಕಡೆ ಗ್ರೆನೇಡ್‌ಗಳನ್ನು ಎಸೆದು ಆತ ಕತ್ತಲಲ್ಲಿ ತಪ್ಪಿಸಿಕೊಂಡ. ಆತನ ಮನೆಯಲ್ಲಿ ಶೋಧಕಾರ್ಯ ನಡೆಸಿದ ವೇಳೆ ಶಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ. ಜೊತೆಗೆ, ಉಗ್ರನಿಗೆ ಆಶ್ರಯ ನೀಡಿದ್ದಕ್ಕಾಗಿ ಆತನ ತಂದೆ ಮತ್ತು ಮೂವರು ಸಹೋದರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುನೀಲ್‌ ಮತ್ತು ಪೀತಾಂಬರ್‌ ಸೇಬು ತೋಟದಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಪೀತಾಂಬರ್‌ ಗಾಯಗೊಂಡಿದ್ದಾರೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು