ನವದೆಹಲಿ:ಮುಕ್ತ ನ್ಯಾಯಾಲಯದ ಪರಿಕಲ್ಪನೆ ಬಲಪಡಿಸುವ ಉದ್ದೇಶದಿಂದ ಐದು ನ್ಯಾಯಾಧೀಶರ ಸಂವಿಧಾನ ಪೀಠಗಳಲ್ಲಿ ವಿಚಾರಣೆ ನಡೆಸುತ್ತಿರುವ ಪ್ರಕರಣಗಳನ್ನು ಸೆ. 27 ರಿಂದ ನೇರ ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಆದ್ಯತೆ ಮೇರೆಗೆ ಸಾಂವಿಧಾನಿಕ ಪೀಠದಪ್ರಕರಣಗಳ ವಿಚಾರಣೆ ನೇರ ಪ್ರಸಾರ ಪ್ರಾರಂಭಿಸಲುಮಂಗಳವಾರ ನಡೆದ ಪೂರ್ಣ ನ್ಯಾಯಾಲಯದ ಸಭೆ ನಿರ್ಧರಿಸಿದೆ.ಸಭೆ ನಿರ್ಧಾರ ಸರ್ವಾನುಮತದಿಂದ ಕೂಡಿದ್ದು, ವಿಚಾರಣೆಗಳನ್ನು ಆರಂಭದಲ್ಲಿ ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆ ಪ್ರಚಾರ ಪೋಸ್ಟರ್ನಲ್ಲಿ ಸಾವರ್ಕರ್ ಫೋಟೊ

ಆ. 27 ರಂದು ಯು.ಯು.ಲಲಿತ್ ಅವರು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಕಿ ಇರುವ ಪ್ರಕರಣಗಳ ವಿಚಾರಣೆಗಾಗಿ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚನೆ ಮಾಡಿದ್ದಾರೆ.

ಪ್ರಸ್ತುತ ಸಾಂವಿಧಾನಿಕ ಪೀಠದ ಎದುರು ಭೋಪಾಲ್ ಅನಿಲ ದುರಂತ ಪ್ರಕರಣ, ಇಡಬ್ಯ್ಲೂಎಸ್ಕೋಟಾದ ಮಾನ್ಯತೆ,ಸೇವೆಗಳ ಮೇಲಿನ ನಿಯಂತ್ರಣ ವಿಚಾರಣೆ ನಡೆಯುತ್ತಿದೆ.

ಇಡಬ್ಲ್ಯೂಎಸ್ ಕೋಟಾ, ಹಿಜಾಬ್ ನಿಷೇಧ, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವಾರು ವಿಷಯಗಳ ವಿಚಾರಣೆಯ ನೇರ ಪ್ರಸಾರವನ್ನು ತಕ್ಷಣವೇ ಪ್ರಾರಂಭಿಸುವಂತೆಇತ್ತೀಚೆಗೆ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಮುಖ್ಯನ್ಯಾಯಮೂರ್ತಿ ಮತ್ತು ಇತರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು.

ಗುಜರಾತ್, ಒಡಿಶಾ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವು ಹೈಕೋರ್ಟ್ಗಳು ಈಗಾಗಲೇ ಯೂಟ್ಯೂಬ್ನಲ್ಲಿ ಕಲಾಪಗಳ ನೇರ ಪ್ರಸಾರ ಆರಂಭಿಸಿವೆ.ಸಿಜೆಐ ಎನ್. ವಿ. ರಮಣ ಅವರ ಕೊನೆ ದಿನದ ಔಪಚಾರಿಕ ಪೀಠದ ಕಲಾಪಗಳನ್ನು ನೇರ ಪ್ರಸಾರ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.