ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಅಖಿಲೇಶ್ ಯಾದವ್ ಭೇಟಿಯಾದ ಬಿಎಸ್‌ಪಿಯ ಐವರು ಶಾಸಕರು

Last Updated 15 ಜೂನ್ 2021, 11:06 IST
ಅಕ್ಷರ ಗಾತ್ರ

ಲಖನೌ: ಬಿಎಸ್‌ಪಿಯಿಂದ ಅಮಾನತುಗೊಂಡಿರುವ ಐವರು ಶಾಸಕರು ಮಂಗಳವಾರ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಈ ಮೂಲಕ ಐವರು ಶಾಸಕರು ಸಮಾಜವಾದಿ ಪಕ್ಷ ಸೇರಬಹುದು ಎಂಬ ಗುಮಾನಿ ಗರಿಗೆದರಿದೆ.

ಸುಮಾರು 20 ನಿಮಿಷ ಭೇಟಿಯಾಗಿದ್ದು, ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆ ಕುರಿತು ಚರ್ಚೆ ನಡೆಯಿತು ಎಂದು ಶಾಸಕಿ ಸುಷ್ಮಾ ಪಟೇಲ್‌ ತಿಳಿಸಿದರು. ಭವಿಷ್ಯದ ತೀರ್ಮಾನ ಕುರಿತ ಪ್ರಶ್ನೆಗೆ, ವೈಯಕ್ತಿಕವಾಗಿ ನಾನು ಸಮಾಜವಾದಿ ಪಕ್ಷ ಸೇರಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು.

ಸದ್ಯ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷವು 18 ಶಾಸಕರನ್ನು ಹೊಂದಿದೆ. ಈ ಪೈಕಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಐವರು ಶಾಸಕರನ್ನು ಅಮಾನತುಪಡಿಸಲಾಗಿತ್ತು.

ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ನಮಗೆ ವಿಪ್‌ ನೀಡಲಾಗಿರಲಿಲ್ಲ. ಅಡ್ಡ ಮತದಾನವೂ ಆಗಿರಲಿಲ್ಲ. ಅಖಿಲೇಶ್ ಯಾದವ್‌ ಅವರನ್ನು ಭೇಟಿ ಮಾಡಿದ್ದ ಕಾರಣಕ್ಕೆ ಅಮಾನತುಪಡಿಸಲಾಗಿತ್ತು ಎಂದು ಸುಷ್ಮಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT