ಶುಕ್ರವಾರ, ಮೇ 14, 2021
25 °C

ಇರಾನ್‌: ನಟಾನ್ಜ್‌ ಪರಮಾಣು ಕೇಂದ್ರದಲ್ಲಿ ಹಠಾತ್‌ ವಿದ್ಯುತ್ ಸ್ಥಗಿತ

ಎಪಿ Updated:

ಅಕ್ಷರ ಗಾತ್ರ : | |

ದುಬೈ: ಇರಾನ್‌ನ ನಟಾನ್ಜ್‌ ಪರಮಾಣು ಕೇಂದ್ರದಲ್ಲಿ ಭಾನುವಾರ ಹಠಾತ್ ಆಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಯುರೇನಿಯಂ ಉತ್ಪಾದನೆ ಪ್ರಕ್ರಿಯೆಯ ವೇಗ ಇನ್ನಷ್ಟು ಹೆಚ್ಚಿಸಲು ಸುಧಾರಿತ ಸೆಂಟ್ರಿಫ್ಯೂಜ್‌ಗಳ ಕಾರ್ಯಾರಂಭ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

‘ವಿದ್ಯುತ್ ಸ್ಥಗಿತಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ’ ಎಂದು ಇರಾನ್‌ ನಾಗರಿಕ ಪರಮಾಣು ಕಾರ್ಯಕ್ರಮದ ವಕ್ತಾರ ಬೆಹ್ರೌಜ್ ಕಮಲ್ವಾಂಡಿ ತಿಳಿಸಿದ್ದಾರೆ.

ಸೈಬರ್‌ ದಾಳಿಯೇ ವಿದ್ಯುತ್‌ ಪೂರೈಕೆ ಸ್ಥಗಿತಕ್ಕೆ ಕಾರಣ ಎಂದು ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.