ಗುರುವಾರ , ಮಾರ್ಚ್ 23, 2023
23 °C

ತಮಿಳುನಾಡಿನಲ್ಲಿ ಟಿವಿ ಚಾನೆಲ್ ಆರಂಭಿಸಲಿರುವ ಬಿಜೆಪಿ: ಅಣ್ಣಾಮಲೈ ಉಸ್ತುವಾರಿ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡಿನಲ್ಲಿ ತಮ್ಮದೆಯಾದ ಒಂದು ಟಿವಿ ಚಾನೆಲ್ ಆರಂಭಿಸಲು ಬಿಜೆಪಿ ಮುಂದಾಗಿದೆ.

ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಟಿವಿ ಚಾನೆಲ್‌ನ ಶೀರ್ಷಿಕೆಯನ್ನು ಶೀಘ್ರವಾಗಿ ಅನಾವರಣ ಮಾಡಲಾಗುತ್ತದೆ. ಅಲ್ವರ್‌ಪೇಟೆಯಲ್ಲಿ ಇದರ ಕಚೇರಿ ಇರಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ನೇತೃತ್ವದಲ್ಲಿ ಈ ಚಾನೆಲ್ ಕೆಲಸ ಮಾಡಲಿದ್ದು, ತನ್ನ ರಾಜಕೀಯ ಧ್ಯೇಯೋಧ್ದೇಶಗಳನ್ನು ಜನರ ಮನೆ ಮನೆಗೆ ತಲುಪಲು ಬಿಜೆಪಿ ಮುಂದಾಗಿದೆ.

ಬಿಜೆಪಿಯ ಈ ನಡೆ ತಮಿಳುನಾಡಿನ ಇತರೆ ರಾಜಕೀಯ ಪಕ್ಷಗಳಿಗೆ ಆಶ್ಚರ್ಯ ಮೂಡಿಸಿದೆ. ಈಗಾಗಲೇ ಕೇರಳದಲ್ಲಿ ಬಿಜೆಪಿ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ‘ಜನಂ’ ಟಿವಿ ಮಾದರಿಯಲ್ಲೇ ಬಹುತೇಕ ಅದೇ ಹೆಸರಿನಲ್ಲಿ ಈ ಚಾನೆಲ್ ಅಸ್ತಿತ್ವಕ್ಕೆ ಬರಲಿದೆ.  ಇದೊಂದು ಸುದ್ದಿ ಹಾಗೂ ಇನ್ಪೋಟೇನ್‌ಮೆಂಟ್ ಚಾನೆಲ್ ಆಗಿರಲಿದೆ ಎನ್ನಲಾಗಿದೆ.

ಜನಂ ವಾಹಿನಿ ಆರ್‌ಎಸ್‌ಎಸ್‌ ಸಿದ್ದಾಂತಗಳನ್ನು ಮುನ್ನೆಲೆಗೆ ತರಲು ಹಾಗೂ ಶಬರಿಮಲೆ ಘಟನೆಯಲ್ಲಿ ಸುದ್ದಿ ಬಿತ್ತರಿಸುವಾಗ ಮುಂಚೂಣಿಯಲ್ಲಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು