ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ 50 ಲಕ್ಷ ಮಂದಿಯ ಆಧಾರ್‌, ದೂರವಾಣಿ ಸಂಖ್ಯೆ, ಖಾಸಗಿ ಮಾಹಿತಿ ಸೋರಿಕೆ!

ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿನ ಸಾರ್ವಜನಿಕ ಪ್ರಸರಣ ವ್ಯವಸ್ಥೆ(ಪಿಡಿಎಸ್‌)ನಿಂದ 50 ಲಕ್ಷಕ್ಕೂ ಹೆಚ್ಚು ಮಂದಿಯ ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ ಸೇರಿದಂತೆ ಖಾಸಗಿ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಬೆಂಗಳೂರು ಮೂಲದ ಸೈಬರ್‌ ಸೆಕ್ಯೂರಿಟಿ ಸಂಸ್ಥೆ ಟೆಕ್ನಿಸ್ಯಾಂಕ್ಟ್‌ ಹೇಳಿದೆ.

ಸುಮಾರು 50 ಲಕ್ಷ ಮಂದಿಯ ಆಧಾರ್‌ ಕಾರ್ಡ್‌ ಮಾಹಿತಿಯ ಜೊತೆಗೆ ಫಲಾನುಭವಿಗಳು ನೀಡಿದ್ದ ಕುಟುಂಬ ಸದಸ್ಯರ ಮಾಹಿತಿ, ವಯಸ್ಸು, ದೂರವಾಣಿ ಸಂಖ್ಯೆ ಮತ್ತಿತರ ಖಾಸಗಿ ಮಾಹಿತಿಗಳನ್ನು ಹ್ಯಾಕರ್‌ ತನ್ನ ವೇದಿಕೆಯಲ್ಲಿ ಪ್ರಕಟಿಸಿರುವುದಾಗಿ ಟೆಕ್ನಿಸ್ಯಾಂಕ್ಟ್‌ ತಿಳಿಸಿದೆ.

ಇದರಿಂದ ಮುಗ್ಧ ಜನ ಹಾಗೂ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಸೈಬರ್‌ ದಾಳಿಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ತಮಿಳುನಾಡಿನ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಒಟ್ಟು 49,19,668 ಮಂದಿಯ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಇ ಮೇಲ್‌ ಐಡಿ ಮತ್ತು ಆಧಾರ್‌ ಸಂಖ್ಯೆ ಸೇರಿದೆ. 3,59,485 ಮಂದಿಯ ದೂರವಾಣಿ ಸಂಖ್ಯೆಗಳು ಸೋರಿಕೆಯಾಗಿವೆ. ನವಜಾತ ಶಿಶುಗಳು ಸೇರಿದಂತೆ ನಾಗರಿಕರ ದಾಖಲೆಗಳನ್ನು ಕಾಪಾಡಲು ರಾಜ್ಯ ಸರ್ಕಾರ ಆರಂಭಿಸಿದ್ದ 'ಮಕ್ಕಳ್‌ ನಂಬರ್‌' ಕೂಡ ಸೋರಿಕೆಯಾದ ಮಾಹಿತಿಯಲ್ಲಿ ಸೇರಿದೆ.

ಸರ್ಕಾರದೊಂದಿಗೆ ಸಹಯೋಗ ಹೊಂದಿದ ವೆಬ್‌ಸೈಟ್‌ನಿಂದ ನೇರವಾಗಿ ಮಾಹಿತಿ ಸೋರಿಕೆಯಾಗಿದೆಯೇ ಅಥವಾ ಮೂರನೇ ವ್ಯಕ್ತಿಯ ಕಡೆಯಿಂದ ಸೋರಿಕೆಯಾಗಿದೆಯೇ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಪಿಡಿಎಸ್‌ ವ್ಯವಸ್ಥೆಯಲ್ಲಿ ಸುಮಾರು 6.8 ಕೋಟಿ ಮಂದಿ ದಾಖಲಾತಿ ಮಾಡಿಕೊಂಡಿದ್ದಾರೆ.

ಸೋರಿಕೆಯಾದ ಮಾಹಿತಿಯನ್ನು ಜೂನ್‌ 28ಕ್ಕೆ ಅಪ್‌ಲೋಡ್‌ ಮಾಡಿರುವುದು ಪತ್ತೆಯಾಗಿತ್ತು. ಒಂದು ಗಂಟೆಯ ಬಳಿಕ ಮಾಹಿತಿಯನ್ನು ಅಲ್ಲಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಟೆಕ್ನಿಸ್ಯಾಂಕ್ಟ್‌ ಸಿಇಒ ನಂದಕಿಶೋರ್‌ ಹರಿಕುಮಾರ್‌ 'ಎನ್‌ಡಿಟಿವಿ'ಯ ಗ್ಯಾಜೆಟ್ಸ್ 360ಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT