ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ: ಪೊಲೀಸರಿಂದ ತೀವ್ರಗೊಂಡ ಪರಿಶೀಲನೆ

Last Updated 30 ಜನವರಿ 2021, 6:14 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿರುವ ಇಸ್ರೇಲ್‌ನ ರಾಯಭಾರ ಕಚೇರಿ ಬಳಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ದೆಹಲಿಯ ವಿಶೇಷ ಘಟಕದ ಪೊಲೀಸರು ಶನಿವಾರ ಬೆಳಿಗ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಇಸ್ರೇಲ್‌ನ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಜೆ ಸ್ಪೋಟ ಸಂಭವಿಸಿತ್ತು. ವಿಶೇಷ ಘಟಕದ ‍ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಶುಕ್ರವಾರ ಸಂಜೆ 5.05ಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಪೋಟಗೊಂಡಿತ್ತು. ಅದೃಷ್ಟವಶಾತ್‌ ಈ ಸ್ಪೋಟದಿಂದಾಗಿ ಯಾರು ಗಾಯಗೊಂಡಿಲ್ಲ. ಆಸ್ತಿ ಹಾನಿಯೂ ಸಂಭವಿಸಿಲ್ಲ’ ಎಂದು ದೆಹಲಿ ಪೊಲೀಸರು ಹೇಳಿದರು.

‘ಘಟನಾ ಸ್ಥಳದಲ್ಲಿ ಇಸ್ರೇಲ್‌ ರಾಯಭಾರಿ ಕಚೇರಿಯ ವಿಳಾಸವಿರುವ ಪತ್ರವೊಂದು ಸಿಕ್ಕಿದೆ’ ಎಂದು ಮೂಲಗಳು ಹೇಳಿವೆ.

ಈ ಸ್ಫೋಟ ಸಂಭವಿಸಿದ ಸ್ಥಳದಿಂದ ಕೆಲವೇ ಅಂತರದಲ್ಲಿ, ‘ಬೀಟಿಂಗ್‌ ರಿಟ್ರೀಟ್‌’ (ಗಣರಾಜ್ಯೋತ್ಸವದ ಅಂಗವಾಗಿ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT