ಶುಕ್ರವಾರ, ಜೂನ್ 25, 2021
21 °C

ಕಾಶ್ಮೀರದಲ್ಲಿ ಕ್ಷೀಣಿಸುತ್ತಿದೆ ಉಗ್ರರ ಜೀವಿತಾವಧಿ

ಝುಲ್ಫಿಕರ್ ಮಜಿದ್ Updated:

ಅಕ್ಷರ ಗಾತ್ರ : | |

DH File Stock

ಶ್ರೀನಗರ: ಕಾಶ್ಮೀರದಲ್ಲಿ ಉಗ್ರ ಸಂ‌ಘಟನೆಗೆ ಸೇರ್ಪಡೆಯಾಗುತ್ತಿರುವವರ ಜೀವಿತಾವಧಿ ಕಳೆದ ಮೂರು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಶೇ 65ರಷ್ಟು ಉಗ್ರರ ಪೈಕಿ ಸಂಘಟನೆಗೆ ಸೇರಿದ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಭದ್ರತಾ ಪಡೆಗಳ ನಡುವಣ ಸಹಕಾರ ಮತ್ತು ಜಂಟಿ ಕಾರ್ಯಾಚರಣೆ,  ಬಲಿಷ್ಠ ಗುಪ್ತಚರ ದಳ, ತರಬೇತಿಯಿಲ್ಲದ ಉಗ್ರರು ಇದಕ್ಕೆ ಕಾರಣ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ‘ಡೆಕ್ಕನ್ ಹೆರಾಲ್ಡ್‌’ಗೆ ಮಾಹಿತಿ ನೀಡಿದ್ದಾರೆ.

ಈ ಮೊದಲು ಉಗ್ರರು ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆಯುತ್ತಿದ್ದರು. ಆದರೆ ಈಗದು ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷ 166 ಸ್ಥಳೀಯ ಉಗ್ರರ ಸಹಿತ 203 ಮಂದಿ ಉಗ್ರರನ್ನು ಕಣಿವೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ. 2019ರಲ್ಲಿ 157 ಮತ್ತು 2018ರಲ್ಲಿ 257 ಉಗ್ರರನ್ನು ಹತ್ಯೆಗೈಯ್ಯಲಾಗಿದೆ.

ಹೀಗಾಗಿ ಕಳೆದ ಮೂರು ವರ್ಷಗಳ ಅಂಕಿಅಂಶ ಗಮನಿಸಿದರೆ, ಉಗ್ರರ ಪೈಕಿ ಶೇ 35ರಷ್ಟು ಮಂದಿ ಒಂದು ವರ್ಷದೊಳಗೇ ಸಾವನ್ನಪ್ಪುತ್ತಿದ್ದಾರೆ ಎಂದು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಉಗ್ರರ ಅಕ್ರಮ ನುಸುಳುವಿಕೆ ಕೂಡ ಕಡಿಮೆಯಾಗಿದೆ, ಭದ್ರತಾ ಪಡೆಗಳು ಉಗ್ರರ ಮನವೊಲಿಕೆ ಮತ್ತು ಶರಣಾಗತ ಆಯ್ಕೆಗಳನ್ನು ನೀಡುತ್ತಿದ್ದಾರೆ. ಜತೆಗೆ ಯುವಕರಿಗೆ ತಿಳಿವಳಿಕೆ ನೀಡಿ, ಉಗ್ರ ಸಂಘಟನೆ ಸೇರುವುದನ್ನು ತಡೆಯುತ್ತಿದ್ದಾರೆ ಎಂದು ಸೇನಾಧಿಕಾರಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು