ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ 20 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ದೆಹಲಿ: ಸೋಂಕಿತರ ಪ್ರಮಾಣದಲ್ಲಿ ಇಳಿಮುಖ
Last Updated 11 ಮೇ 2021, 11:52 IST
ಅಕ್ಷರ ಗಾತ್ರ

ನವದೆಹಲಿ: ಸಂಪೂರ್ಣ ಲಾಕ್‌ಡೌನ್‌ ಘೋಷಣೆಗೆ ಒಳಗಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳಲ್ಲಿನ ಕೊರೊನಾ ಸೋಂಕು ದೃಢಪಟ್ಟವರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ (ಏಪ್ರಿಲ್‌ 12ರಿಂದ) ಇದೇ ಮೊದಲ ಬಾರಿಗೆ ಸೋಂಕಿತರ ಶೇಕಡಾವಾರು ಪ್ರಮಾಣವು ಶೇ 18ಕ್ಕಿಂತ ಕಡಿಮೆ ದಾಖಲಾಗಿದೆ.

ಮಂಗಳವಾರ ಸಂಜೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಿರುವ 70,276 ಜನರ ಪೈಕಿ 12,481 (ಶೇ 17.76) ಜನರಲ್ಲಿ ಸೋಂಕು ದೃಢಪಟ್ಟಿದೆ. 13,583 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 83,809ಕ್ಕೆ ಇಳಿದಿದೆ.

ಆದರೆ, ಈ ಅವಧಿಯಲ್ಲಿ ಕೊರೊನಾದಿಂದ ಬಳಲುತ್ತಿದ್ದ 347 ಜನ ಸಾವಿಗೀಡಾಗಿದ್ದು, 2020ರ ಮಾರ್ಚ್‌ನಿಂದ ಇದುವರೆಗೆ 20,010 ಜನ ಸಾಂಕ್ರಾಮಿಕ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಂತಾಗಿದೆ.

ಇದುವರೆಗೆ ನಗರದಾದ್ಯಂತ ಒಟ್ಟು 13,48,699 ಜನ ಸೋಂಕಿಗೆ ಒಳಗಾಗಿದ್ದು, 12,44,880 ಜನ ಗುಣಮುಖರಾಗಿದ್ದಾರೆ.

ಸೋಂಕಿತರ ಸಂಖ್ಯೆ ಇಳಿಮುಖ:
ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಸೋಂಕು ಹರಡುವ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿರುವುದು ಸಾರ್ವಜನಿಕರ ಆತಂಕವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದೆ.

ಕಳೆದ ಸೋಮವಾರ 12,651 (ಶೇ 19.10) ಜನ ಸೋಂಕಿಗೆ ಒಳಗಾಗಿದ್ದು, 13,306 ಜನ ಗುಣಮುಖರಾಗಿದ್ದರು. 319 ಜನ ಸಾವಿಗೀಡಾಗಿದ್ದರು.

ಕಳೆದ ಭಾನುವಾರ 13,336 (ಶೇ 21.67) ಜನರಲ್ಲಿ ಸೋಂಕು ದೃಢಪಟ್ಟಿತ್ತು. 14,738 ಜನ ಗುಣಮುಖರಾಗಿದ್ದರೆ, 273 ಜನ ಪ್ರಾಣ ಕಳೆದುಕೊಂಡಿದ್ದರು.

ಕಳೆದ ಶನಿವಾರ 17,364 (ಶೇ 23.34) ಜನ ಸೋಂಕಿತರಾಗಿದ್ದು, 20,160 ಜನ ಗುಣಮುಖರಾಗಿದ್ದರು. 332 ಜನ ಸಾವಿಗೀಡಾಗಿದ್ದರು.

ಕಳೆದ ಶುಕ್ರವಾರ 19,832 (ಶೇ 24.92) ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿತ್ತು. 19,085 ಜನ ಗುಣಮುಖರಾಗಿದ್ದರೆ, 341 ಜನ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT