ಕನ್ನಡದಲ್ಲಿ ಟಿಟಿಡಿ ಭಕ್ತಿ ಚಾನಲ್

ಹೈದರಾಬಾದ್: ‘ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್’ನ (ಎಸ್‌ವಿಬಿಸಿ) ಕನ್ನಡ ಮತ್ತು ಹಿಂದಿ ಚಾನಲ್‌ಗಳು ಯುಗಾದಿ ದಿನವಾದ ಏಪ್ರಿಲ್ 13ರಂದು ಆರಂಭವಾಗಲಿವೆ.
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಿರ್ವಹಿಸುವ ‘ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್’ ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅಪಾರ ಜನಪ್ರಿಯವಾಗಿದೆ. ಅಧ್ಯಾತ್ಮದ ಈ ಚಾನಲ್ ಅನ್ನು ಹೊಸದಾಗಿ ಎರಡು ಭಾಷೆಗಳಲ್ಲಿ ಆರಂಭಿಸುವ ಬಗ್ಗೆ ಎಸ್‌ವಿಬಿಸಿಯ ಮಂಡಳಿ ಬುಧವಾರ ನಿರ್ಧಾರ ಕೈಗೊಂಡಿದೆ.
ಭಕ್ತಿ ಸಂಗೀತವನ್ನು ಪ್ರಧಾನವಾಗಿಟ್ಟುಕೊಂಡು ಎಸ್‌ವಿಬಿಸಿ ರೇಡಿಯೊ ಆರಂಭಿಸಲು ಸಹ ಟಿಟಿಡಿ ಉದ್ದೇಶಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.