ಎಲ್‌ಇಟಿಯ ಮೂವರು ಉಗ್ರರ ಸೆರೆ

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಲಷ್ಕರ್–ಎ–ತೈಯಬಾ(ಎಲ್‌ಇಟಿ) ಸಂಘಟನೆಯ ಮೂವರು ಹೈಬ್ರಿಡ್ ಉಗ್ರರನ್ನು ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಪಠಣ್‌ನ ಗೋಷ್‌ಬಗ್ ನಿವಾಸಿಗಳಾದ ನೂರ್ ಮೊಹಮ್ಮದ್ ಯಾತೂ, ಮೊಹಮ್ಮದ್ ರಫೀಕ್ ಪರ್ರೆ ಮತ್ತು ಮೊಹಮ್ಮದ್ ಅಕ್ಬರ್ ಪರ್ರೆ ಬಂಧಿತ ಹೈಬ್ರಿಡ್ ಉಗ್ರರು.
ಏಪ್ರಿಲ್ 15ರಂದು ಪಠಣ್‌ನ ಗೋಷ್‌ಬಾಗ್‌ನ ಸರಪಂಚ ಮನ್ಸೂರ್ ಅಹ್ಮದ್ ಬಂಗ್ರೂ ಅವರ ಹತ್ಯೆ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಈ ಮೂವರು ಭಾಗಿಯಾಗಿದ್ದು, ಭಯೋತ್ಪಾದನಾ ದಾಳಿ ಸಂಚು ನಡೆಸಿದ್ದರು. ಬಂಧಿತರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ವಕ್ತಾರರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.