ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಮಾಜಿ ಪ್ರಧಾನಿ ಅಬೆ ಹತ್ಯೆಗೂ, ಅಗ್ನಿಪಥ ಯೋಜನೆಗೂ ಸಂಬಂಧ ಕಲ್ಪಿಸಿದ ಟಿಎಂಸಿ

Last Updated 9 ಜುಲೈ 2022, 17:04 IST
ಅಕ್ಷರ ಗಾತ್ರ

ಕೋಲ್ಕತ್ತ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ ಹಾಗೂ ಸೇನಾ ನೇಮಕಾತಿಯ 'ಅಗ್ನಿಪಥ'ಯೋಜನೆಗೂ ಸಂಬಂಧ ಕಲ್ಪಿಸಿತೃಣ ಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಮುಖವಾಣಿ 'ಜಾಗೊ ಬಾಂಗ್ಲಾ'ದಲ್ಲಿ ಲೇಖನ ಬರೆಯಲಾಗಿದೆ.

'ಶಿಂಜೊ ಅಬೆ ಹತ್ಯೆಯಲ್ಲಿ ಅಗ್ನಿಪಥದ ನೆರಳು' ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಲಾಗಿದೆ. ಶಿಂಜೊ ಹತ್ಯೆಗೈದ ತೆತ್ಸುಯ ಯಮಾಗಾಮಿ ಜಪಾನ್‌ ಸಾಗರ ರಕ್ಷಣಾ ಪಡೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮೂರು ವರ್ಷ ಕರ್ತವ್ಯ ನಿರ್ವಹಿಸಿದ್ದ. ಆದಾಗ್ಯೂ ಆತನಿಗೆ ಪಿಂಚಣಿ ಸೌಲಭ್ಯ ದೊರೆತಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಮೂರು ವರ್ಷ ಕರ್ತವ್ಯ ನಿರ್ವಹಿಸಿದನಂತರ ಆತ (ಯಮಾಗಾಮಿ) ಕೆಲಸ ಕಳೆದುಕೊಂಡಿದ್ದ. ಅದಾದ ಬಳಿಕ ಬೇರೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ನಿರುದ್ಯೋಗ ಪರಿಸ್ಥಿತಿಯು ಆತನಲ್ಲಿ ಅಭದ್ರತೆ ಹಾಗೂ ಹತಾಶೆ ಮನೋಭಾವವನ್ನು ಸೃಷ್ಟಿಸಿತ್ತು. ಪ್ರಾಸಂಗಿಕವಾಗಿ ಕೇಂದ್ರ ಸರ್ಕಾರವು ರಕ್ಷಣಾ ವ್ಯವಸ್ಥೆಗೆ 'ಅಗ್ನಿಪಥ' ಅಡಿಯಲ್ಲಿ ಜಪಾನ್‌ ಮಾದರಿಯಲ್ಲೇ ನೇಮಕಾತಿಆರಂಭಿಸಲು ಯೋಜಿಸಿದೆ. ಅಗ್ನಿಪಥ ಯೋಜನೆ ವಿರುದ್ಧ ಸಾಮಾನ್ಯ ಜನರು ಹೊಂದಿರುವ ಅಸಮಾಧಾನದ ಛಾಯೆ ಶಿಂಜೊ ಅಬೆಯ ಸಾವಿನಲ್ಲಿದೆ' ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ ಅಬೆ ಹಂತಕ, ನಿವೃತ್ತಿ ನಂತರ ಪಿಂಚಿಣಿಯಂತಹ ಯಾವುದೇ ಸೌಲಭ್ಯ ಪಡೆಯುತ್ತಿರಲಿಲ್ಲ. ಖಿನ್ನತೆಯಿಂದ ಬಳಲುತ್ತಿದ್ದ ಎಂಬುದು ಸ್ಪಷ್ಟವಾಗಿದೆ ಎಂದುಟಿಎಂಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಕುನಾಲ್‌ ಘೋಷ್‌ ಹೇಳಿದ್ದಾರೆ.

'ಅದೇರೀತಿ, ನಾಲ್ಕು ವರ್ಷ ಕೆಲಸ ಮಾಡಿದ ಬಳಿಕ ನಿವೃತ್ತಿ ನಂತರದ ಸೌಲಭ್ಯಗಳಿಂದ ವಂಚಿತರಾಗುವ ಆಗ್ನಿವೀರರೂ ಅಬೆ ಹಂತಕನಂತೆಯೇ ಖಿನ್ನತೆಯಿಂದ ಬಳಲಿದ್ದಾರೆ. ಸೇನಾ ತರಬೇತಿ ಪಡೆದ ಯುವಕರನ್ನು ಅಗ್ನಿಪಥ ಯೋಜನೆಯು ತಪ್ಪು ದಾರಿಯಲ್ಲಿ ಮುನ್ನಡೆಸುತ್ತದೆ' ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ವಕ್ತಾರ ಶಮಿಕ್‌ ಭಟ್ಟಾಚಾರ್ಯ,ಟಿಎಂಸಿ ನಾಯಕರು ಇಂತಹ ಆಧಾರರಹಿತ ಆರೋಪ ಮಾಡುವ ಮೂಲಕ ಯೋಧರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 'ನಿವೃತ್ತಿಯಾದ ಯೋಧರು ಭಾರತದಲ್ಲಿ ನಾಗರಿಕರನ್ನು ಹತ್ಯೆ ಮಾಡಿರುವ ಬಗ್ಗೆ ಎಲ್ಲಿಯಾದರೂ ಕೇಳಿದ್ದೀರಾ? ಇವೆಲ್ಲ ಆಧಾರವಿಲ್ಲದ ಆರೋಪಗಳು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವನ್ನೂ ಓದಿ
*

*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT