ಭಾನುವಾರ, ಮೇ 22, 2022
23 °C

29 ನಿಮಿಷಗಳ ಕಾಲ ಯುಪಿ ಸಿಎಂ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶುಕ್ರವಾರ ತಡರಾತ್ರಿ ಹ್ಯಾಕ್ ಮಾಡಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹ್ಯಾಕರ್‌ಗಳು ಮುಖ್ಯಮಂತ್ರಿ ಕಚೇರಿಯ ಖಾತೆಯಿಂದ 400-500 ಟ್ವೀಟ್‌ಗಳನ್ನು ಮಾಡಿದ್ದರು ಎಂದು ಅವರು ಹೇಳಿದ್ದಾರೆ.

‘ರಾತ್ರಿ ಸುಮಾರು 29 ನಿಮಿಷಗಳ ಕಾಲ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ಸುಮಾರು 400-500 ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು ಮತ್ತು ಅಸ್ವಾಭಾವಿಕ ಚಟುವಟಿಕೆಯ ಆಧಾರದ ಮೇಲೆ ಖಾತೆಯನ್ನು ಅಮಾನತುಗೊಳಿಸಲಾಗಿತ್ತು’ಎಂದು ಅಧಿಕಾರಿ ಶನಿವಾರ ಪಿಟಿಐಗೆ ತಿಳಿಸಿದರು.

ಇದೀಗ, ಉತ್ತರ ಪ್ರದೇಶದ ಮುಖ್ಯಮಂತ್ರಿ ಟ್ವಿಟರ್ ಖಾತೆಯನ್ನು ಶನಿವಾರ ಬೆಳಿಗ್ಗೆ ಮರುಸ್ಥಾಪಿಸಲಾಗಿದೆ.

@CMOffice ಎಂಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಹ್ಯಾಂಡಲ್ 40 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

ಹ್ಯಾಕ್ ಮಾಡಿದ ಬಳಿಕ ಟ್ವಿಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರವನ್ನು ತೆಗೆದು ಕಾರ್ಟೂನ್‌ ಚಿತ್ರ ಹಾಕಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು