ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀನಾ ಮಣಿಮೇಕಲೈ ಅವರ 'ಕಾಳಿ' ಸಾಕ್ಷ್ಯಚಿತ್ರದ ಪೋಸ್ಟರ್‌ ತಡೆಹಿಡಿದ ಟ್ವಿಟರ್‌

Last Updated 6 ಜುಲೈ 2022, 13:08 IST
ಅಕ್ಷರ ಗಾತ್ರ

ನವದೆಹಲಿ: ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ 'ಕಾಳಿ' ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ ತಡೆಹಿಡಿದಿದೆ.

ಕಾಳಿ ಪೋಸ್ಟರ್‌ ಮೂಲಕ ಹಿಂದೂ ದೇವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಟ್ವಿಟರ್‌ ಈ ನಿರ್ಧಾರ ಕೈಗೊಂಡಿದೆ.

ಜುಲೈ 2ರಂದು 'ಕಾಳಿ' ಸಾಕ್ಷ್ಯಚಿತ್ರದ ಪೋಸ್ಟರ್‌ಅನ್ನು ಲೀನಾ ಟ್ವೀಟ್‌ ಮಾಡಿದ್ದರು. ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್‌ ಸೇದುತ್ತಿರುವುದು ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿತ್ತು.

'ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿರುವ ಹಿನ್ನೆಲೆ ಭಾರತದಲ್ಲಿ ಲೀನಾ ಮಣಿಮೇಕಲೈ ಅವರ ಟ್ವೀಟ್‌ ಅನ್ನು ತಡೆಹಿಡಿಯಲಾಗಿದೆ' ಎಂದು ಮೂಲ ಟ್ವೀಟ್‌ನ ಜಾಗದಲ್ಲಿ ಕಾಣಿಸುತ್ತಿದೆ. ಯಾವಾಗ ಈ ಟ್ವೀಟ್‌ಅನ್ನು ಟ್ವಿಟರ್‌ ತೆಗೆದುಹಾಕಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಕಾಳಿ ಮಾತೆಗೆ ಅವಮಾನ ಮಾಡಿದಆರೋಪಕ್ಕೆ ಸಂಬಂಧಿಸಿ ಮಣಿಮೇಕಲೈ ವಿರುದ್ಧ ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT