ಮಂಗಳವಾರ, ಅಕ್ಟೋಬರ್ 27, 2020
28 °C

ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಇಬ್ಬರ ವಿರುದ್ಧ ಪ್ರಕರಣ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲೀಗಡ (ಉತ್ತರ ಪ್ರದೇಶ): ಇಲ್ಲಿನ ಕೋಲ್‌ ತಾಲ್ಲೂಕಿನಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು. 

ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಇರುವ 45 ಕೊಳವೆ ಬಾವಿಗಳ ಸಮೀಪ ಅಳವಡಿಸಿರುವ ಶಿಲಾಫಲಕಗಳಲ್ಲಿ ರಾಷ್ಟ್ರಧ್ವಜವನ್ನು ಸೂಕ್ತವಾಗಿ ಪ್ರದರ್ಶಿಸಿಲ್ಲ ಎಂದು ಬಿಜೆಪಿ ಶಾಸಕ ರವೀಂದ್ರ ಪಾಲ್‌ ಸಿಂಗ್‌ ದೂರು ನೀಡಿದ್ದರು. ಈ ಕೊಳವೆ ಬಾವಿಗಳನ್ನು ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಒ) ನಿರ್ಮಿಸಿತ್ತು. ಶಿಲಾಫಲಕಗಳಲ್ಲಿ ಅರೆಬಿಕ್‌ ವಾಕ್ಯಗಳಿದ್ದು, ಕುವೈಟ್‌ನ ರಾಷ್ಟ್ರಧ್ವಜದ ಜೊತೆಗೆ ಭಾರತದ ತ್ರಿವರ್ಣಧ್ವಜದ ಚಿತ್ರವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

‘ಕೊಳವೆಬಾವಿಗಳಿಗೆ ಅಳವಡಿಸಿರುವ ಹ್ಯಾಂಡ್‌ ಪಂಪ್‌ಗಳು ಗುಣಮಟ್ಟದ್ದಾಗಿಲ್ಲ. ಈ ಕೊಳವೆ ಬಾವಿಗಳಿಂದ ಬರುವ ನೀರು ಕಲುಷಿತವಾಗಿರುವ ಸಾಧ್ಯತೆಯೂ ಇದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಿದು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಲ್‌ ಉಪವಿಭಾಗ ಮ್ಯಾಜಿಸ್ಟ್ರೇಟ್‌ ಅನಿತಾ ಯಾದವ್‌ ಅವರು ಎನ್‌ಜಿಒದ ಪೂರ್ವಾಪರದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು