ಸೋಮವಾರ, ಜುಲೈ 26, 2021
21 °C

ಕಪ್ಪಾ ರೂಪಾಂತರಿ ಸೋಂಕು: ಉತ್ತರ ಪ್ರದೇಶದಲ್ಲಿ 2 ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಕೋವಿಡ್ ಸೋಂಕಿನ ‘ಕಪ್ಪಾ’ ರೂಪಾಂತರಿತ ತಳಿಯ ಎರಡು ಪ್ರಕರಣಗಳು ಉತ್ತರಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇಲ್ಲಿನ ಕಿಂಗ್‌ ಜಾರ್ಜ್‌ ಮೆಡಿಕಲ್‌ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ 109 ಮಾದರಿಗಳ ಪರೀಕ್ಷೆ ನಡೆದಿತ್ತು. ಈ ಪೈಕಿ 107ರಲ್ಲಿ ಡೆಲ್ಟಾ ಪ್ಲಸ್‌ ಸೋಂಕು, 2ರಲ್ಲಿ ಕಪ್ಪಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.

ಈ ಪ್ರಕರಣಗಳು ರಾಜ್ಯಕ್ಕೆ ಹೊಸದಲ್ಲ. ಹೊಸ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ತಪಾಸಣೆ  ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ. ಸದ್ಯ, ನಿತ್ಯದ ಪ್ರಕರಣ ದೃಢಪಡುವ ಸರಾಸರಿ ಪ್ರಮಾಣ ಶೇ 0.04ರಷ್ಟಿದೆ ಎಂದು ತಿಳಿಸಿದೆ.

ಕಪ್ಪಾ ರೂಪಾಂತರಿತ ತಳಿ ಕುರಿತ ಪ್ರಶ್ನೆಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಮಿತ್ ಮೋಹನ್ ಪ್ರಸಾದ್ ಅವರು, ಈ ಬಗ್ಗೆ ಆತಂಕಕ್ಕೆ ಅಗತ್ಯವಿಲ್ಲ. ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು