ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವೂ ಸೇರಿ ದೇಶದಲ್ಲಿವೆ 21 ನಕಲಿ ವಿಶ್ವವಿದ್ಯಾಲಯಗಳು

Last Updated 26 ಆಗಸ್ಟ್ 2022, 12:34 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ 21 ವಿಶ್ವವಿದ್ಯಾಲಯಗಳನ್ನು‘ನಕಲಿ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಘೋಷಿಸಿದೆ. ಇದರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಮೂಡಲಿಗಿ ತಾಲ್ಲೂಕಿನ ಬಡಗಾವಿ ಸರ್ಕಾರ್‌ ಮುಕ್ತ ವಿಶ್ವವಿದ್ಯಾಲಯ ಎಜುಕೇಷನ್‌ ಸೊಸೈಟಿಯೂ ಸೇರಿದೆ.

ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 8 ನಕಲಿ ವಿಶ್ವವಿದ್ಯಾಲಯಗಳು ಇವೆ.

‘ದೇಶದಲ್ಲಿ ಮಾನ್ಯತೆ ನೀಡದ, ಸ್ವಯಂ ಘೋಷಿತ 21 ವಿಶ್ವವಿದ್ಯಾಲಯಗಳಿವೆ. ಇವುಗಳು ಯುಜಿಸಿ ಕಾಯ್ದೆಯನ್ನು ಉಲ್ಲಂಘಿಸಿವೆ. ಇವುಗಳಿಗೆ ಪದವಿ ಪ್ರದಾನ ಮಾಡುವ ಯಾವುದೇ ಅರ್ಹತೆ ಇಲ್ಲ’ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ್‌ ಹೇಳಿದ್ದಾರೆ.

ಮಹಾರಾಷ್ಟ್ರ, ಪುದುಚೇರಿ, ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೂ ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT