ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್ ಅಪಘಾತ: ಮೃತರಿಗೆ ಝೆಲೆನ್‌ಸ್ಕಿ ಗೌರವ

Last Updated 21 ಜನವರಿ 2023, 16:13 IST
ಅಕ್ಷರ ಗಾತ್ರ

ಕೀವ್‌: ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಶನಿವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು.

ರಾಜಧಾನಿ ಕೀವ್‌ನ ‌ಬ್ರೊವರಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದವರ ಪೈಕಿ ಏಳು ಮಂದಿಯ ಕುಟುಂಬ ಸದಸ್ಯರೊಂದಿಗೆ ಝೆಲೆನ್‌ಸ್ಕಿ ಮಾತನಾಡಿದರು.

ಝೆಲೆನ್‌ಸ್ಕಿ ಮತ್ತು ಅವರ ಪತ್ನಿ ಅವರು ಶವಪೆಟ್ಟಿಗೆಗಳ ಮೇಲೆ ಹೂವು ಹಾಕಿ, ಗೌರವ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು.

ಗೃಹ ಸಚಿವ ಡೆನಿಸ್‌ ಮೊನಾಸ್ಟಿರಸ್ಕಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ರಾಜಧಾನಿ ಕೀವ್‌ ಪೂರ್ವದ ಉಪನಗರ ಬ್ರೊವರಿಯ ಕಿಂಡರ್‌ಗಾರ್ಟನ್‌ ಬಳಿ ಅಪ್ಪಳಿಸಿದ ಪರಿಣಾಮ 18 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT