ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ, ಕೇರಳದಲ್ಲಿ ಐಎಸ್‌ಐಎಸ್‌ ಉಗ್ರರು: ಯುಎನ್‌ ವರದಿ ತಪ್ಪು

Last Updated 20 ಸೆಪ್ಟೆಂಬರ್ 2020, 15:45 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ‘ಗಮನಾರ್ಹ ಸಂಖ್ಯೆಯ’ ಐಎಸ್‌ಐಎಸ್‌ ಉಗ್ರರ ಇರುವಿಕೆಯ ಕುರಿತ ವಿಶ್ವಸಂಸ್ಥೆಯ ವರದಿಯನ್ನು ಸರ್ಕಾರ ನಿರಾಕರಿಸಿದ್ದು, ಇದರಲ್ಲಿರುವ ಅಂಕಿ–ಅಂಶಗಳು ‘ವಾಸ್ತವಿಕವಾಗಿ ಸರಿ ಇಲ್ಲ’ ಎಂದು ತಿಳಿಸಿದೆ.

ವಿಶ್ವಸಂಸ್ಥೆಯವರದಿಯ ಕುರಿತು ಸರ್ಕಾರಕ್ಕೆ ಮಾಹಿತಿ ಇದೆಯೇ ಎನ್ನುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಜಿ.ಕಿಶನ್‌ ರೆಡ್ಡಿ, ‘ವರದಿಯನ್ನು ಸರ್ಕಾರ ಗಮನಿಸಿದೆ. ಆದರೆ, ಕೇರಳ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಉಗ್ರರು ಇದ್ದಾರೆ ಎನ್ನುವುದು ವಾಸ್ತವಿಕವಾಗಿ ಸರಿಯಿಲ್ಲ. ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಉಗ್ರರ ಇರುವಿಕೆಯ ಕುರಿತು 34 ಹಾಗೂ ಲಷ್ಕರ್‌ ಇ ತಯಬಾದ ಉಗ್ರರ ಇರುವಿಕೆಯ ಕುರಿತು 20 ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ದಾಖಲಿಸಿದೆ’ ಎಂದರು.

ದೇಶದಲ್ಲಿ ಐಎಸ್‌ಐಎಸ್‌, ಐಎಸ್ ಖೋರಸನ್‌, ಲಷ್ಕರ್‌ ಇ ತಯಬಾದಂಥ ಉಗ್ರ ಸಂಘಟನೆಗಳ ಇರುವಿಕೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಇದಕ್ಕೆ ಸಂಬಂಧಿಸಿದಂತೆ ಎನ್‌ಐಎ, 160 ಜನರನ್ನು ಹಾಗೂ 80 ಆರೋಪಿಗಳನ್ನು ಬಂಧಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT