ಸೋಮವಾರ, ಮೇ 16, 2022
24 °C

ಹ್ಯಾಂಡ್ ಗ್ರೆನೇಡ್‌ ಪೂರೈಕೆ ಸ್ಥಳೀಯ ಸಂಸ್ಥೆಗೆ ಭಾರತ ಸೇನೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ‘ಆತ್ಮನಿರ್ಭರ ಭಾರತ್’ ಭಾಗವಾಗಿ ಸೇನೆಯು ಭಾನುವಾರ ಹತ್ತು ಲಕ್ಷ  ಬಹುಮಾದರಿ ಹ್ಯಾಂಡ್ ಗ್ರೆನೇಡ್‌‌ ಪೂರೈಕೆ ಕುರಿತಂತೆ ಉತ್ತರ ಕಾಶ್ಮೀರದ ಗುಲ್ಮರ್ಗ್‌ನಲ್ಲಿ ಇರುವ ಸೋಲಾರ್‌ ಉದ್ಯಮವೊಂದರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು.

ದೇಶದ ಆರ್ಥಿಕ ಸ್ವಾವಲಂಬನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಘೋಷಣೆಯನ್ನು ಮಾಡಿದ್ದಾರೆ. ಒಡಂಬಡಿಕೆಗೆ ಸೇನೆಯ ಜನರಲ್ ಆಫೀಸರ್ ಕಮ್ಯಾಂಡರ್ ಮೇಜರ್‌ ಜನರಲ್ ವೀರೇಂದರ್ ಹಾಗೂ ಕಂಪನಿಯ ಅಧಿಕಾರಿ ರಮಿತ್ ಅರೊರಾ ಸಹಿ ಹಾಕಿದರು.

ಸೇನಾ ಅಧಿಕಾರಿಗೆ 100 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ಭಾರತದ ಧ್ವಜದ ತದ್ರೂಪು ಮಾದರಿ ನೀಡಿದ ಅರೋರಾ ಅವರು, ಸೋಲಾರ್ ಉದ್ಯಮವು ಆತ್ಮನಿರ್ಭರ್ ಭಾರತ ಯೋಜನೆಯಡಿ ಕಂಪನಿಯು ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತಿದೆ. ಹ್ಯಾಂಡ್‌ ಗ್ರೆನೇಡ್‌‌ ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಪ್ರಥಮ ಶಸ್ತ್ರಾಸ್ತ್ರವಾಗಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು