ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನಾಯಕ ಮನಮೋಹನ್‌ ಸಿಂಗ್‌ ಗುಣಗಾನ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Last Updated 9 ನವೆಂಬರ್ 2022, 10:08 IST
ಅಕ್ಷರ ಗಾತ್ರ

ನವದೆಹಲಿ:ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನುಕೇಂದ್ರ ಸಚಿವ ನಿತಿನ್ ಗಡ್ಕರಿ ಗುಣಗಾನ ಮಾಡಿದ್ದಾರೆ.

ದೇಶಕ್ಕೆಉದಾರ ಆರ್ಥಿಕ ನೀತಿಯ ಅಡಿಪಾಯ ಹಾಕಿ, ಬಡವರಿಗೆಆರ್ಥಿಕ ಸುಧಾರಣೆಗಳ ಪ್ರಯೋಜನಗಳನ್ನು ಒದಗಿಸಿದರು. ಇದರ ಪರಿಣಾಮ ದೇಶದ ಆರ್ಥಿಕತೆ ವೇಗ ಪಡೆಯಲು ಸಾಧ್ಯವಾಯಿತು ಎಂದು ಹೊಗಳಿದ್ದಾರೆ.

1991ರಲ್ಲಿ ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ರೂಪಿಸಿದ ಆರ್ಥಿಕ ಸುಧಾರಣೆಗಳ ಕಾರಣಕ್ಕೆ ದೇಶವು ಅವರಿಗೆ ಋಣಿಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಮನಮೋಹನ್‌ ಸಿಂಗ್‌ ರೂಪಿಸಿದ ಸುಧಾರಣೆಗಳು ಬಡವರು ಮತ್ತು ರೈತರ ಬೆಳವಣಿಗೆಗೆ ಕಾರಣವಾಯಿತು. ಇದು ನನ್ನ ಅನುಭವಕ್ಕೆ ಬಂದಿದೆ ಎಂದರು. 90ರ ದಶಕದಲ್ಲಿ ನಾನು ಸಚಿವನಾಗಿದ್ದಾಗ ಹಣ ಸಂಗ್ರಹಿಸಿ ರಸ್ತೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಸದ್ಯ ಹೆದ್ದಾರಿ ಸಚಿವಾಲಯವು ಟೋಲ್‌ನಿಂದ ವಾರ್ಷಿಕ ₹40,000 ಕೋಟಿ ಆದಾಯಗಳಿಸುತ್ತಿದೆ. 2024ರ ವೇಳೆಗೆ ಇದು ₹1.40 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ಸಚಿವಾಲಯ ಯಾವುದೇ ಹಣಕಾಸು ಕೊರತೆ ಎದುರಿಸುತ್ತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT