ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಸರ್ಕಾರಗಳು ಜಾತಿವಾದಿ ಸರ್ಕಾರಗಳು: ಅಮಿತ್‌ ಶಾ

Last Updated 12 ಫೆಬ್ರುವರಿ 2022, 3:37 IST
ಅಕ್ಷರ ಗಾತ್ರ

ಬರೇಲಿ: ಉತ್ತರ ಪ್ರದೇಶದಲ್ಲಿ ಇದಕ್ಕೂ ಮೊದಲು ರಚನೆ ಆಗಿದ್ದ ಸರ್ಕಾರಗಳು ಜಾತಿವಾದಿ ಸರ್ಕಾರ ಗಳಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಜಾತಿಗಳ ಒಳಿತಿಗಾಗಿ ಕೆಲಸ ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದರು.

ಎಸ್‌ಪಿ ಸರ್ಕಾರ ಇದ್ದಾಗ ಕೇವಲ ಒಂದು ಜಾತಿಯ ಅಭಿವೃದ್ಧಿಗಾಗಿ ಕೆಲಸ ಮಾಡಿತು. ಬಹುಜನ ಸಮಾಜ ಪಕ್ಷ ಸರ್ಕಾರ ರಚಿಸಿದ್ದಾಗ ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿತು. ಮೋದಿ ಅವರು ಎಲ್ಲರ ಜೊತೆ, ಎಲ್ಲರ ವಿಕಾಸ (ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌) ತತ್ವದಡಿ ಕೆಲಸ ಮಾಡಿದರು ಎಂದರು.

ಬರೀಲಿ ಜಿಲ್ಲೆಯ ಓಲ್ನಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಉತ್ತರ ‍ಪ್ರದೇಶದಲ್ಲಿ ಗೂಂಡಾ ರಾಜ್ಯ ಕೊನೆಗಾಣಿಸುವುದಾಗಿ 2017ರಲ್ಲಿ ಬಿಜೆಪಿಯ ಅಧ್ಯಕ್ಷ ಆಗಿದ್ದ ಸಮಯದಲ್ಲಿ ಭರವಸೆ ನೀಡಿದ್ದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆ ಭರವಸೆಗಳನ್ನು ಈಡೇರಿಸಿದ್ದಾರೆ. ಮಾಫಿಯಾಗಳು ರಾಜ್ಯದಲ್ಲಿ ಕಾಣಿಸುತ್ತಿಲ್ಲ. ಆಜಂ ಖಾನ್‌, ಅತಿಕ್‌ ಅಹ್ಮದ್‌ ಮತ್ತು ಮುಕ್ತಾರ್‌ ಅನ್ಸಾರಿ ಈಗ ಜೈಲಿನಲ್ಲಿ ಇದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT